Thursday, June 18, 2026
spot_imgspot_img
spot_imgspot_img

ಇಂದು ಮತ್ತೆ ಪಾಕ್ ಡ್ರೋನ್ ಪತ್ತೆ; ಸೇನಾಪಡೆಯಿಂದ ಗುಂಡಿನ ದಾಳಿ

- Advertisement -
- Advertisement -

ಜಮ್ಮು: ಅಂತಾರಾಷ್ಟ್ರೀಯ ಗಡಿ ಭಾಗದಲ್ಲಿ ಭಾರತೀಯ ಗಡಿ ಪ್ರವೇಶಿಸಲು ಸನ್ನದ್ಧವಾಗಿದ್ದ ಶಂಕಿತ ಪಾಕಿಸ್ತಾನಿ ಕಣ್ಗಾವಲು ಡ್ರೋನ್ ಮೇಲೆ ಭದ್ರತಾ ಪಡೆಗಳು ಗುಂಡಿನ ದಾಳಿ ನಡೆಸಿವೆ ಎಂದು ತಿಳಿದು ಬಂದಿದೆ. ಜಮ್ಮು ಹೊರಭಾಗದಲ್ಲಿರುವ ಅರ್ನಿಯಾ ಪ್ರದೇಶದಲ್ಲಿ ಇಂದು ಮುಂಜಾನೆ 4.25 ರ ಸಮಯದಲ್ಲಿ ಡ್ರೋನ್ ಅನ್ನು ಪತ್ತೆ ಹಚ್ಚಿದ ಭದ್ರತಾ ಸಿಬ್ಬಂದಿಗಳು ಆರು ಭಾರಿ ಗುಂಡಿನ ದಾಳಿ ನಡೆಸಿದಾಗ ತಕ್ಷಣ ಡ್ರೋನ್ ಮತ್ತೆ ಪಾಕಿಸ್ತಾನದತ್ತ ವಾಪಸಾಯಿತು ಎಂದು ಮಾಹಿತಿ ದೊರಕಿದೆ.

6ಕ್ಕೂ ಹೆಚ್ಚು ಸುತ್ತಿನಲ್ಲಿ ಭದ್ರತಾ ಪಡೆಗಳು ಡ್ರೋಣ್ ಮೇಲೆ ಗುಂಡಿನ ದಾಳಿ ನಡೆಸಿದ್ದು, ಕೂಡಲೇ ಆಗಸದಲ್ಲಿ ಹಾರಾಡುತ್ತಿದ್ದ ಡ್ರೋಣ್ ಪಾಕಿಸ್ತಾನದ ಕಡೆಗೆ ಹಿಂತಿರುಗಿತ್ತು ಎಂದು ಹೇಳಿದ್ದಾರೆ. ಕಳೆದ ಭಾನುವಾರ ಭಾರತೀಯ ವಾಯು ನೆಲೆಯ ಮೇಲಿನ ಡ್ರೋನ್ ಅಟ್ಯಾಕ್ ಘಟನೆಯ ನಂತರ ಭಾರತೀಯ ಸೇನೆ ಗಡಿಯಲ್ಲಿ ಕಟ್ಟೆಚ್ಚರ ವಹಿಸಿದೆ. ಈ ಘಟನೆಯ ನಂತರ ಮತ್ತೊಂದು ಭಾರಿ ಡ್ರೋನ್ ಕಾಣಿಸಿಕೊಂಡಿದ್ದು, ಭಾರತದಲ್ಲಿರುವ ಪ್ರಮುಖ ಸೇನಾ ನೆಲೆಗಳ ಮೇಲೆ ಕಣ್ಗಾವಲಿಗಾಗಿ ಪಾಕಿಸ್ತಾನ ಡ್ರೋನ್ ಬಳಕೆಗೆ ಮುಂದಾಗಿದೆ ಎನ್ನಲಾಗಿದೆ.

- Advertisement -

Related news

error: Content is protected !!