ವಿವಿಧ ವೈದಿಕ-ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ಸಂಪನ್ನಗೊಂಡ ಎರಡು ದಿನಗಳ ಸಾರ್ವಜನಿಕ ಶ್ರೀ ಗಣೇಶೋತ್ಸವ
ಚಂದಳಿಕೆ: ಕಾರ್ತಿಕ್ ಫ್ರೆಂಡ್ಸ್ ಕ್ಲಬ್ (ರಿ.) ಚಂದಳಿಕೆ-ವಿಟ್ಲ ಸಾರ್ವಜನಿಕ ಶ್ರೀ ಗಣೇಶೋತ್ಸವ ಗೌರವ ಸಮಿತಿ , ಚಂದಳಿಕೆ ಇದರ ಆಶ್ರಯದಲ್ಲಿ 26ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮವು ಸೆ. 07ನೇ ಶನಿವಾರ ಮತ್ತು 08ನೇ ಆದಿತ್ಯವಾರದಂದು ’ಮಂಗಳಾ ಮಂಟ’ ಶ್ರೀ ರಾಮನಗರ, ಚಂದಳಿಕೆಯಲ್ಲಿ ಬಹಳ ಅದ್ದೂರಿಯಾಗಿ ನಡೆಯಿತು.
7-9-2024ನೇ ಶನಿವಾರದಂದು ಬೆಳಗ್ಗೆ ಗಣಪತಿ ಹೋಮ ನಡೆದು ಬಳಿಕ ಮೂರ್ತಿ ಪ್ರತಿಷ್ಠೆ ನಡೆಯಿತು. ನಂತರ ಸಾರ್ವಜನಿಕ ಶ್ರೀ ಗಣೇಶೋತ್ಸವ ಗೌರವ ಸಮಿತಿ ಚಂದಳಿಕೆ ಇದರ ಅಧ್ಯಕ್ಷ ಶಂಕರಭಟ್ ಬದನಾಜೆ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭಾಕಾರ್ಯಕ್ರಮವನ್ನು ವಿಧ್ಯಾವರ್ದಕ ಸಂಘ ದ.ಕ.ಜಿ.ಪ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಂದಳಿಕೆ,ವಿಟ್ಲ ಇದರ ಅಧ್ಯಕ್ಷ ಭವಾನಿ ಕೆ. ರೈ ಕೊಲ್ಯ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಗೌರವ ಸಮಿತಿ ಚಂದಳಿಕೆ ವಿಟ್ಲ ಇದರ ಕಾರ್ಯಧ್ಯಕ್ಷ ಕೃಷ್ಣಯ್ಯ ಕೆ. ವಿಟ್ಲ ಅರಮನೆ ಮತ್ತು ವಿನೋದ್ ಶೃಂಗೇರಿ ಕ್ಯಾಂಪ್ಕೊ ಪುತ್ತೂರು, ಪುತ್ತೂರು ಬಿಜೆಪಿ ಮಂಡಲ ಇದರ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್ , ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷ ಕರುಣಾಕರ ಗೌಡ ನಾಯ್ತೊಟ್ಟುಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಪ್ರಗತಿಪರ ಕೃಷಿಕ ಪುರುಷೋತ್ತಮ ಭಟ್ ಬದನಾಜೆ ಧ್ವಜಾರೋಹಣಗೈದು ಗಣೇಶೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ಧೂಮಾವತಿ ಸ್ವ-ಸಹಾಯ ಸಂಘ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ವಲಯ ಇವರಿಂದ ಭಜನಾ ಸೇವೆ ನಡೆಯಿತು. ಬೆಳಿಗ್ಗೆ 11-30ರಿಂದ ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳು ನಡೆದು ಬಳಿಕ ಮಧ್ಯಾಹ್ನ 12-30ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು. ಸಂಜೆ ಶ್ರೀ ಮಹಾದೇವಿ ಮಹಿಳಾ ಭಜನಾ ಮಂಡಳಿ ಕಬಕ ಇವರಿಂದ ಭಜನಾ ಸೇವೆ ನಡೆಯಿತು. ಸಂಜೆ ಬಹುಮಾನ ವಿತರಣೆ ನಡೆಯಿತು. ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಂಗಸಿರಿ ಸಾಂಸ್ಕೃತಿ ವೇದಿಕೆ ( ರಿ. ) ಬದಿಯಡ್ಕ ಹಾಗೂ ಯಕ್ಷರಂಜಿನಿ ಕಲಾ ಕೇಂದ್ರ ನೀರ್ಚಾಲು ಇವರ ಸಹಯೋಗದಲ್ಲಿ ಪ್ರಸಂಗ – ಮೋಕ್ಷ ಸಂಗ್ರಾಮ ಎಂಬ ಯಕ್ಷಗಾನ ಬಯಲಾಟ ನಡೆದು ಬಳಿಕ ರಾತ್ರಿ 8-00ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಿತು.
ದಿನಾಂಕ 8-9-2024 ನೇ ಆದಿತ್ಯವಾರ ಪೂರ್ವಾಹ್ನ ಗಣಪತಿ ಹೋಮ, ನಂತರ ಪೂಜೆ ನಡೆದು ಬಳಿಕ ವಿಶ್ವನಾಥ ದೇವಾಡಿಗ ಮತ್ತು ಬಳಗ ವಿಟ್ಲ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು. ನಂತ ಸಾರ್ವಜನಿಕರಿಗೆ ಹಗ್ಗಾಜಗ್ಗಾಟ ಸ್ಪರ್ಧೆ ನಡೆಯಿತು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆೆಯಿತು. ಸಂಜೆ ರಂಗಪೂಜೆ, ಮಹಾಪೂಜೆ, ಪ್ರಸಾದ ವಿತರಣಾ ಕಾರ್ಯಕ್ರಮ ನಡೆದು ಬಳಿಕ ಚಲಿಸುವ ರಸಮಂಜರಿ ವಿಶೇಷ ಆಕರ್ಷಣೆಯೊಂದಿಗೆ ಅದ್ದೂರಿ ಶೋಭಾಯಾತ್ರೆ ನಡೆಯಿತು.