ನೂತನ ಅಧ್ಯಕ್ಷರಾಗಿ ಶಶಿ ಕೇಪುಳಗುಡ್ಡೆಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಬಾಲಕೃಷ್ಣ ಪೂಜಾರಿ ಪಟ್ಲ ಆಯ್ಕೆ



ಚಂದಳಿಕೆ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವಕೇಸರಿ ಅಬೀರಿ-ಅತಿಕಾರಬೈಲು (ರಿ) ಚಂದಳಿಕೆ ಸಂಘಟನೆಯ ವಾರ್ಷಿಕ ಮಹಾಸಭೆ ಇಂದು ಚಂದಳಿಕೆ ಯುವಕೇಸರಿ ಕಾರ್ಯಾಲಯದಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಇಡ್ಕಿದು ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸುಧಾಕರ ಶೆಟ್ಟಿ ಬೀಡಿನಮಜಲು ಹಾಗೂ ಉದ್ಯಮಿ ತಾರಾನಾಥ ಅಳಕೆಮಜಲು ಭಾಗವಹಿಸಿದ್ದರು. ಸಭೆಯಲ್ಲಿ ನೂತನ ಕಾರ್ಯಕಾರಿಣಿ ರಚಿಸಲಾಯಿತು.
ನೂತನ ಅಧ್ಯಕ್ಷರಾಗಿ ಶಶಿ ಕೇಪುಳಗುಡ್ಡೆ , ಗೌರವಾಧ್ಯಕ್ಷರಾಗಿ ದಯಾನಂದ ಶೆಟ್ಟಿ ಉಜಿರೆಮಾರು, ಕಾರ್ಯಾಧ್ಯಕ್ಷರಾಗಿ ವನಿತ್ ಡೆಪ್ಪಿನಿ , ಉಪಾಧ್ಯಕ್ಷರಾಗಿ ದುರ್ಗಾಪ್ರಸಾದ್ ಅತಿಕಾರಬೈಲು, ಅಶ್ವಥ್ ಪೂಜಾರಿ ಪರನೀರು ಮತ್ತು ಸನತ್ ಸಾಲಿಯಾನ್ ಚಂದಳಿಕೆ, ಪ್ರಧಾನ ಕಾರ್ಯದರ್ಶಿಯಾಗಿ ಬಾಲಕೃಷ್ಣ ಪೂಜಾರಿ ಪಟ್ಲ, ಸಂಘಟನಾ ಕಾರ್ಯದರ್ಶಿಯಾಗಿ ಭರತ್ ಜೋಗಿ ಡೆಪ್ಪಿನಿ, ಜತೆ ಕಾರ್ಯದರ್ಶಿಯಾಗಿ ಸುರೇಶ್ ಓಟೆ ಮತ್ತು ನಿಖಿಲ್ ಜೋಗಿ, ಕೋಶಾಧಿಕಾರಿಯಾಗಿ ಮಧುಕರ ಅಬೀರಿ, ಜೊತೆ ಕೋಶಾಧಿಕಾರಿಯಾಗಿ ಪ್ರವೀಣ್ ಗೌಡ ಕಟ್ಟತ್ತಿಲ ಮತ್ತು ಚರಣ್ ಡೆಪ್ಪಿನಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಗಣೇಶ ಅಬೀರಿ, ಪ್ರಧಾನ ಸಂಚಾಲಕರಾಗಿ ಯೋಗೀಶ್ ಕೇಪುಳಗುಡ್ಡೆ ಮತ್ತು ಪುನೀತ್ ಜೋಗಿ ಕುರುಂಬಳ, ದತ್ತಿನಿಧಿ ಪ್ರಮುಖರಾಗಿ ವನಿತ್ ಅಬೀರಿ, ಕಾರ್ಯಾಲಯ ಕಾರ್ಯದರ್ಶಿಯಾಗಿ ಪುಷ್ಪರಾಜ್ ಡೆಪ್ಪಿನಿ, ಕ್ರೀಡಾಕಾರ್ಯದರ್ಶಿಯಾಗಿ ಮಹೇಶ್ ಪಡೀಲ್, ಸಾಮಾಜಿಕ ಜಾಲತಾಣ ಪ್ರಮುಖರಾಗಿ ವೈಭವ್ ಶೆಟ್ಟಿ ಅಬೀರಿ, ಕಾನೂನು ಸಲಹೆಗಾರರಾಗಿ ಗೋವಿಂದ ರಾಜ್ ಪೆರುವಾಜೆ ಆಯ್ಕೆಯಾದರು.
ಗೌರವ ಸಲಹೆಗಾರರಾಗಿ ಅಶೋಕ್ ಕುಮಾರ್ ರೈ ಕೊಡಿಂಬಾಡಿ, ದೇಜಪ್ಪ ಪೂಜಾರಿ ನಿಡ್ಯ, ಸಂಜೀವ ಪೂಜಾರಿ ವಿಟ್ಲ, ಈಶ್ವರ ಬಂಗೇರ ಅಬೀರಿ, ಗಂಗಾಧರ ಪೂಜಾರಿ ಪರನೀರು, ಗಣೇಶ್ ಪೂಜಾರಿ ಪಟ್ಲ, ಪದ್ಮನಾಭ ಶೆಟ್ಟಿ ಚಪುಡಿಯಡ್ಕ, ಚಂದ್ರಹಾಸ ಅಬೀರಿ, ಲೋಕನಾಥ ಕುರುಂಬಳ, ಸದಾನಂದ ಗೌಡ ಡೆಪ್ಪಿನಿ, ಚಿದಾನಂದ ಶೆಟ್ಟಿ ಉಜಿರೆಮಾರು ಆಯ್ಕೆಯಾದರು.
ಈ ವರ್ಷ ಒಟ್ಟು ರೂ.1,26,000 ಮತ್ತು 578 ಕೆ.ಜಿ ಅಕ್ಕಿಯನ್ನು ಹಾಗೂ ಕಳೆದ 8 ವರ್ಷದಲ್ಲಿ ಒಟ್ಟು ರೂ.10,52,530 ಮತ್ತು 2806 ಕೆ.ಜಿ ಅಕ್ಕಿಯನ್ನು ದತ್ತಿನಿಧಿ ಯೋಜನೆಯಡಿ ವಿತರಿಸಲಾಗಿದೆ. ಅಲ್ಲದೆ ತುರ್ತು ಸಂದರ್ಭದಲ್ಲಿ ಹಲವರಿಗೆ ರಕ್ತದಾನ ಮಾಡಲಾಗಿದೆ ಎಂದು ಸಂಘಟನೆ ತಿಳಿಸಿದೆ. 2025-26ನೇ ಸಾಲಿನಲ್ಲಿ ರೂ.6,78,650 ವ್ಯವಹಾರ ನಡೆಸಲಾಗಿದೆ ಎಂದು ತಿಳಿಸಿದರು.
ಪದ್ಮನಾಭ ಶೆಟ್ಟಿ ಚಪುಡಿಯಡ್ಕ ಸ್ವಾಗತಿಸಿ, ದಿವಾಕರ ಶೆಟ್ಟಿ ಅಬೀರಿ ವಂದಿಸಿದರು. ಸುಶಾಂತ್ ಸಾಲಿಯಾನ್ ಚಂದಳಿಕೆ ನಿರೂಪಿಸಿದರು, ದಯಾನಂದ ಶೆಟ್ಟಿ ಉಜಿರೆಮಾರು ಪ್ರಸ್ತಾವನೆಗೈದರು, ಯೋಗೀಶ್ ಕೇಪುಳಗುಡ್ಡೆ ಸಹಕರಿಸಿದರು.








