




ಚಂದಳಿಕೆ: ಕಾರ್ತಿಕ್ ಫ್ರೆಂಡ್ಸ್ ಕ್ಲಬ್ (ರಿ.) ಚಂದಳಿಕೆ ವಿಟ್ಲ ಸಾರ್ವಜನಿಕ ಶ್ರೀ ಗಣೇಶೋತ್ಸವ ಗೌರವ ಸಮಿತಿ ಚಂದಳಿಕೆ ವಿಟ್ಲ ವತಿಯಿಂದ ಆರ್ಥಿಕ ಧನಸಹಾಯ ನೀಡಲಾಯಿತು.
ವಿಟ್ಲ ಸಮೀಪದ ಕೊಲ್ಯದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ನಾಗೇಶ್ ಕುಲಾಲ್ ಕೊಲ್ಯರವರು ಕೂಲಿ ಕೆಲಸ ಮಾಡಿಕೊಂಡು ಹೆಂಡತಿ ಹಾಗೂ ವಿದ್ಯಾಭ್ಯಾಸ ಮಾಡುವ 1 ನೇ ತರಗತಿಯ ಹೆಣ್ಣು ಮಗಳೊಂದಿಗೆ ಜೀವನ ಸಾಗಿಸುತ್ತಿದ್ದರು. ಕೆಲವು ತಿಂಗಳ ಹಿಂದೆ ಚಂದಳಿಕೆ ಸಮೀಪದ ಕಲ್ಲಕಟ್ಟದಲ್ಲಿ ಬೈಕ್ ಅಪಘಾತದಲ್ಲಿ ತೀವ್ರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಯಾಗಿ ಚಿಕಿತ್ಸೆಯನ್ನು ಪಡೆದು ಈಗ ವಿಟ್ಲ ಸರಕಾರಿ ಆಸ್ಪತ್ರೆಯಲ್ಲಿ ತಲೆ ಹಾಗೂ ಕಾಲು ಶಸ್ತ್ರ ಚಿಕಿತ್ಸೆಯಾಗಿರುವುದರಿಂದ ಮಲಗಿದ್ದಲೇ ಮೂಗಿನ ಮೂಲಕ ದ್ರವರೂಪದ ಆಹಾರದೊಂದಿಗೆ ಚಿಕಿತ್ಸೆ ಮುಂದುವರಿಸುತ್ತಿದ್ದಾರೆ. ಅವರ ಹೆಂಡತಿಯು ಅವರೊಂದಿಗೆ ಆಸ್ಪತ್ರೆಯಲ್ಲಿ ಆರೈಕೆ ಮಾಡುತ್ತಿದ್ದು ಕಷ್ಟದಲ್ಲಿದ್ದಾರೆ. ಕಷ್ಟದಲ್ಲಿರುವ ನಾಗೇಶ ಕೊಲ್ಯರವರಿಗೆ ಆರ್ಥಿಕ ಧನಸಹಾಯ ನೀಡಲಾಯಿತು .

ಈ ಸಂದರ್ಭದಲ್ಲಿ ಸಮಿತಿಯ ಕಾರ್ಯಧ್ಯಕ್ಷ ಕೃಷ್ಣಯ್ಯ ಕೆ ಅರಮನೆ ಹಾಗೂ ಕ್ಲಬ್‌ನ ಗೌರವಾಧ್ಯಕ್ಷ ಗಂಗಾಧರ ಸಿ., ಅಧ್ಯಕ್ಷ ರುಣಾಕರ ಗೌಡ ಎಂ, ಕಾರ್ಯದರ್ಶಿ ಚೇತನ್ ಕಲ್ಲಕಟ್ಟ, ಕೋಶಾಧಿಕಾರಿ ವಿಶ್ವನಾಥ ಎ. ಮತ್ತು ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.








