Thursday, March 28, 2024
spot_imgspot_img
spot_imgspot_img

ಕರ್ನಾಟಕ-ಕೇರಳ ಗಡಿಯಲ್ಲಿ ಹಾಕಲಾಗಿದ್ದ ಮಣ್ಣು ತೆರವುಗೊಳಿಸಿದ ಜಿಲ್ಲಾಡಳಿತ.

- Advertisement -G L Acharya panikkar
- Advertisement -

ವಿಟ್ಲ: ಕೊರೊನಾ ಮಿತಿಮೀರಿದ್ದ ವೇಳೆ ಕೇರಳ-ಕರ್ನಾಟಕ ಗಡಿಭಾಗದ ಕರೋಪಾಡಿ ಗ್ರಾಮದಲ್ಲಿ ಹಾಕಲಾಗಿದ್ದ ಮಣ್ಣನ್ನು ಜಿಲ್ಲಾಡಳಿತದ ಸೂಚನೆ ಮೇರೆಗೆ ಕರೋಪಾಡಿ ಗ್ರಾಮ ಪಂಚಾಯತ್ ವತಿಯಿಂದ ತೆರವು ಮಾಡಿ ಸಂಚಾರಕ್ಕೆ ಮುಕ್ತ ಮಾಡಲಾಗಿದೆ.

ಪ್ರಾರಂಭದಲ್ಲಿ ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ಮೆರೆದಿತ್ತು. ಮುಂಜಾಗ್ರತಾ ಕ್ರಮವಾಗಿ ಕೇರಳ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳನ್ನು ಬಂದ್ ಮಾಡುವಂತೆ ಆಗಿನ ಜಿಲ್ಲಾಧಿಕಾರಿ ಸಿಂದೂ ರೂಪೇಶ್ ಅವರು ಆದೇಶ ನೀಡಿದ್ದರು. ಅದರಂತೆ ಕರೋಪಾಡಿ ಗ್ರಾಮದ ಪೆರೋಡಿ ಕ್ರಾಸ್, ಮುಗುಳಿ, ಬೇತಾ, ಕೋಡ್ಲಾ, ಸೇರಿದಂತೆ ಆರು ಕಡೆಗಳಲ್ಲಿ ರಸ್ತೆಯನ್ನು ಮಣ್ಣು ಹಾಕಿ ಮುಚ್ಚಲಾಗಿತ್ತು. ಇನ್ನೂ ಕೆಲವೆಡೆ ಬ್ಯಾರಿಕೇಡ್ ಅಳವಡಿಸಿ, ಮುಚ್ಚಲಾಗಿತ್ತು. ಸಾರಡ್ಕ ಚೆಕ್ ಪೋಸ್ಟ್ ಅನ್ನು ಬಂದ್ ಮಾಡಲಾಗಿತ್ತು. ಆದರೆ ಕರೋಪಾಡಿ ಗ್ರಾಮದ ಎಲ್ಲಾ ರಸ್ತೆಗಳಲ್ಲಿ ಹಾಕಲಾದ ಮಣ್ಣು ತೆರವುಗೊಳಿಸಲಾಗಿದೆ. ಸಾರಡ್ಕ ಚೆಕ್ ಪೋಸ್ಟ್ ಇನ್ನೂ ತೆರದಿಲ್ಲ. ಕೆಲವು ತಿಂಗಳುಗಳ ಹಿಂದೆ ಕೇರಳ ಸರ್ಕಾರವು ತಮ್ಮ ಗಡಿ ಭಾಗದ ರಸ್ತೆಗಳಿಗೆ ಮಣ್ಣು ಹಾಕಿ ಬಂದ್ ಮಾಡಿತ್ತು. ಕೇರಳ ಸರ್ಕಾರ ತೆರವುಗೊಳಿಸಲು ಇನ್ನೂ ಆದೇಶ ನೀಡಿಲ್ಲ. ಈ ಬಗ್ಗೆ ಕೇರಳ ಜಿಲ್ಲಾಡಳಿತಕ್ಕೆ ಗಡಿಭಾಗದ ಜನರು ಮನವಿ ಸಲ್ಲಿಸಿದ್ದಾರೆ.

ಲಾಕ್ದೌನ್ ಪ್ರಾರಂಭದಲ್ಲಿ ಗಡಿ ಮುಚ್ಚಿಸುವ ಬಗ್ಗೆಯೂ ಪ್ರಸ್ತಾಪ ಮಾಡಿದ್ದು, ಅದರಂತೆ ಬಂದ್ ಮಾಡಲಾಗಿತ್ತು. ಆದರೆ ಈಗ ರಸ್ತೆ ಬಂದ್ ಮಾಡಿರುವುದನ್ನು ತೆರವುಗೊಳಿಸುವ ಬಗ್ಗೆ ಬಹಳ ದಿನದಿಂದ ಸಂಬಂಧಪಟ್ಟ ಅಧಿಕಾರಿಗಳಲ್ಲಿ ಮತ್ತು ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರಲ್ಲಿ ವಿನಂತಿಸಿದ್ದು, ಅದರಂತೆ ತೆರವುಗೊಳಿಸಲಾಗಿದೆ ಎಂದು ವಿನೋದ್ ಶೆಟ್ಟಿ ಪಟ್ಲ ತಿಳಿಸಿದ್ದಾರೆ.

- Advertisement -

Related news

error: Content is protected !!