Friday, June 26, 2026
spot_imgspot_img
spot_imgspot_img

ಹಾಡಹಗಲೇ ಯುವತಿಯ ಕತ್ತು ಸೀಳಿ ಬರ್ಬರ ಹತ್ಯೆ!

- Advertisement -
- Advertisement -

ಚೆನ್ನೈ: ಹಾಡಹಗಲೇ ನಡು ರಸ್ತೆಯಲ್ಲಿ ಕಾಲೇಜು ಯುವತಿಯ ಕುತ್ತಿಗೆಯನ್ನು ಕೊಯ್ದು ಯುವಕನೋರ್ವ ಕೊಲೆ ಮಾಡಿರುವ ಘಟನೆ ತಮಿಳುನಾಡಿನ ಚೆನ್ನೈನ ತಂಬರಂ ರೈಲ್ವೆ ನಿಲ್ದಾಣದ ಬಳಿ ನಡೆದಿದೆ.

ಮೃತ ಯುವತಿ ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನ ವಿದ್ಯಾರ್ಥಿನಿ ಶ್ವೇತಾ (20) ಎನ್ನಲಾಗಿದೆ. ಯುವತಿಯ ಕುತ್ತಿಗೆಯನ್ನು ಚಾಕುವಿನಿಂದ ಸೀಳಿದ ಬಳಿಕ ತಾನೂ ಕುತ್ತಿಗೆಯನ್ನೂ ಚುಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ತಕ್ಷಣವೇ ಸ್ಥಳೀಯರು ಆತನನ್ನು ಆಸ್ಪತ್ರೆಗೆ ಸೇರಿಸಿದ್ದರಿಂದ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಪ್ರೇಮ ವೈಫಲ್ಯವೇ ಈ ಕೊಲೆಗೆ ಕಾರಣವೆಂಬ ಅನುಮಾನ ವ್ಯಕ್ತವಾಗಿದೆ. ಪ್ರೀತಿಯ ವಿಷಯಕ್ಕೆ ಯುವತಿಯನ್ನು ಯುವಕ ಕೊಲೆ ಮಾಡಿರುವ ಅನುಮಾನ ವ್ಯಕ್ತವಾಗಿದೆ. ಈ ಕೃತ್ಯಕ್ಕೆ ಕಾರಣವೇನೆಂಬುದು ಇನ್ನೂ ಖಚಿತವಾಗಿಲ್ಲ.

- Advertisement -

Related news

error: Content is protected !!