Wednesday, August 19, 2026
spot_imgspot_img
spot_imgspot_img

ಚೆನ್ನೈ: ಮಹಿಳಾ ಸರ್ಕಾರಿ ಉದ್ಯೋಗಿಗಳಿಗೆ ತ.ನಾಡು ಸರ್ಕಾರ ಬಂಪರ್‌ ಗಿಫ್ಟ್

- Advertisement -
- Advertisement -

ಚೆನ್ನೈ :ತಮಿಳುನಾಡು ಸರ್ಕಾರ ಮಂಗಳವಾರ ತನ್ನ ಮಹಿಳಾ ಉದ್ಯೋಗಿಗಳಿಗೆ ಬಂಪರ್‌ ಉಡುಗೊರೆ ನೀಡಿದೆ. ಮೂರನೇ ಮಗುವಿನ ಜನನದ ಸಮಯದಲ್ಲಿ ನೀಡುವ ಹೆರಿಗೆ ರಜೆಯನ್ನು 12 ವಾರಗಳಿಂದ 365 ದಿನಗಳವರೆಗೆ ವಿಸ್ತರಿಸುವುದಾಗಿ ಸರ್ಕಾರ ಘೋಷಿಸಿದೆ.

ಪ್ರಸ್ತುತ, ಎರಡಕ್ಕಿಂತ ಕಡಿಮೆ ಮಕ್ಕಳಿರುವ ವಿವಾಹಿತ ಮಹಿಳಾ ಸರ್ಕಾರಿ ಉದ್ಯೋಗಿಗಳಿಗೆ 365 ದಿನಗಳ ಹೆರಿಗೆ ರಜೆ ನೀಡಲಾಗುತ್ತಿದ್ದು, ಎರಡು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳಿರುವವರಿಗೆ 12 ವಾರಗಳವರೆಗೆ ಹೆರಿಗೆ ರಜೆ ನೀಡಲಾಗುತ್ತಿದೆ. ಈಗ ಮೂರನೇ ಮಗು ಆದ್ರೂ ಅವರಿಗೆ 1 ವರ್ಷ ಹೆರಿಗೆ ರಜೆ ಸಿಗಲಿದೆ.

ತಮ್ಮ ಇಲಾಖೆಗೆ ಅನುದಾನಕ್ಕಾಗಿ ಬೇಡಿಕೆ ಸಲ್ಲಿಸಿದ ಸಂದರ್ಭದಲ್ಲಿ ಮಾನವ ಸಂಪನ್ಮೂಲ ನಿರ್ವಹಣಾ ಸಚಿವ ಡಿ. ಶರತ್‌ಕುಮಾರ್ ರಾಜ್ಯ ವಿಧಾನಸಭೆಯಲ್ಲಿ, ತಮಿಳುನಾಡು ಸರ್ಕಾರವು ಸಾಮಾಜಿಕ ಕಲ್ಯಾಣ ಮತ್ತು ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡುವ ಕಲ್ಯಾಣ-ಆಧಾರಿತ ಆಡಳಿತವಾಗಿದೆ. ಮಹಿಳಾ ಸರ್ಕಾರಿ ಉದ್ಯೋಗಿಗಳಿಗೆ ಮೂರನೇ ಮಗು ಆದರೆ ಪ್ರಸ್ತುತ ನೀಡಲಾಗುವ ಹೆರಿಗೆ ರಜೆಯನ್ನು 12 ವಾರಗಳಿಂದ 365 ದಿನಗಳಿಗೆ ಹೆಚ್ಚಿಸಲಾಗುವುದು ಎಂದು ತಿಳಿಸಿದ್ದಾರೆ.

- Advertisement -

Related news

error: Content is protected !!