Monday, August 10, 2026
spot_imgspot_img
spot_imgspot_img

ಚಿಕ್ಕಬಳ್ಳಾಪುರ: ಮ್ಯಾರಥಾನ್ ವೇಳೆ ಏಕಾಏಕಿ ಕುಸಿದುಬಿದ್ದು ಕ್ರೀಡಾಪಟು ಮೃತ್ಯು

- Advertisement -
- Advertisement -

ಚಿಕ್ಕಬಳ್ಳಾಪುರ: ವಿಶ್ವವಿಖ್ಯಾತ ನಂದಿಗಿರಿಧಾಮದಲ್ಲಿ ಆಯೋಜಿಸಿದ್ದ ನಂದಿಹಿಲ್ಸ್ ಮನ್ಸೂನ್ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದ ಕ್ರೀಡಾಪಟುವೊಬ್ಬರು ಓಡುತ್ತಿರುವಾಗಲೇ ಏಕಾಏಕಿ ಕುಸಿದುಬಿದ್ದು ಮೃತಪಟ್ಟಿದ್ದಾರೆ.

ಪಂಜಾಬ್ ಮೂಲದ ಅಮನ್ ದೀಪ್ ಸಿಂಗ್ ಜಗಡೆ(31) ಮೃತಪಟ್ಟವರು. ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್‌ನ ಖಾಸಗಿ ಕಂಪನಿಯಲ್ಲಿ ಅವರು ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. 21 ಕಿಲೋಮೀಟರ್ ಓಟದಲ್ಲಿ ಪಾಲ್ಗೊಂಡಿದ್ದ ಅಮನ್ ದೀಪ್, ನಂದಿಬೆಟ್ಟ ಹತ್ತುವ ವೇಳೆ ಏಕಾಏಕಿ ಕುಸಿದು ಬಿದ್ದರು.

ಮ್ಯಾರಥಾನ್ ಆಯೋಜಕರು ತಕ್ಷಣ ಅವರನ್ನು ಮುದ್ದೇನಹಳ್ಳಿಯ ಶ್ರೀ ಮಧುಸೂದನ್ ಸಾಯಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಅವರು 21 ಕಿಲೋಮೀಟರ್ ಓಟದಲ್ಲಿ ಅರ್ಧದಷ್ಟು ದೂರವನ್ನು ಕ್ರಮಿಸಿದ್ದರು ಎನ್ನಲಾಗಿದೆ. ಇಂದಿನ 21 ಕಿಲೋಮೀಟರ್ ರನ್ನಿಂಗ್ ಕುರಿತು ಅಮನ್ ದೀಪ್ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ “ಇಂದಿನ 21 ಕಿಲೋಮೀಟರ್ ರನ್ನಿಂಗ್‌ನಲ್ಲಿ ದೇವರು ಜೊತೆಗಿದ್ದಾನೆ” ಎಂಬರ್ಥದ ಸಂದೇಶವನ್ನು ಬರೆದುಕೊಂಡಿದ್ದರು. ಆದರೆ ಇದು ಅವರ ಜೀವನದ ಕೊನೆಯ ಓಟವಾಗಿ ಪರಿಣಮಿಸಿದೆ.

- Advertisement -

Related news

error: Content is protected !!