


ನಿನ್ನೆಯಷ್ಟೇ ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ದೊಡ್ಮನೆಯಿಂದ ಹೊರ ಬಂದಿದ್ದಾರೆ. ಮನೆಗೆ ಹೋದ ಮೊದಲ ದಿನವೇ ಸಾಕಷ್ಟು ಸುದ್ದಿ ಮಾಡಿದ್ದರು ಪ್ರದೀಪ್ ಈಶ್ವರ್. ಹಲವು ದಿನಗಳ ಕಾಲ ಸ್ಪರ್ಧಿಯಾಗಿಯೇ ಅವರು ಮನೆಯಲ್ಲಿ ಉಳಿಯಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಅವರು ಹೋದದ್ದು ಅತಿಥಿಯಾಗಿ ಎನ್ನುವುದು ಈಗ ಗೊತ್ತಾಗಿದೆ.
ಚಿಕ್ಕಬಳ್ಳಾಪುರದ ಜನಪ್ರಿಯ ಶಾಸಕ ಎಂದೇ ಖ್ಯಾತರಾಗಿರುವ ಪ್ರದೀಪ್ ಈಶ್ವರ್ ಅಚ್ಚರಿ ಎನ್ನುವಂತೆ ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದಾರೆ. ಅನಾಥ ಮಕ್ಕಳಿಗಾಗಿ ಬಿಗ್ ಬಾಸ್ ಮನೆಗೆ ಪ್ರವೇಶ ಮಾಡಿರುವುದಾಗಿ ಹೇಳಿದ್ದಾರೆ. ಬಿಗ್ ಬಾಸ್ ನಿಂದ ಬಂದ ಹಣವನ್ನು ಅಪ್ಪಅಮ್ಮನಿಲ್ಲದ ಮಕ್ಕಳಿಗೆ ನೀಡಲು ನಿರ್ಧಾರ ಮಾಡಿರುವುದಾಗಿ ಅವರು ಹೇಳಿಕೊಂಡಿದ್ದಾರೆ.
ಆದರೆ, ಪ್ರದೀಪ್ ಈಶ್ವರ್ ಬಿಗ್ ಬಾಸ್ ಗೆ ಹೋಗಿರೋ ವಿಚಾರವನ್ನು ಹಲವರು ಪ್ರಶ್ನೆ ಮಾಡಿದ್ದಾರೆ. ಜನಪ್ರತಿನಿಧಿಯಾಗಿ ರಿಯಾಲಿಟಿ ಶೋಗೆ ಹೋಗಬಹುದಾ ಎಂದು ಹಲವರು ಸೋಷಿಯಲ್ ಮೀಡಿಯಾ ಮೂಲಕ ಪ್ರಶ್ನೆ ಮಾಡಿದ್ದಾರೆ.
ಎಲ್ಲ ಸ್ಪರ್ಧಿಗಳನ್ನು ಶನಿವಾರವೇ ದೊಡ್ಮನೆ ಒಳಗೆ ಕಳುಹಿಸಲಾಗಿತ್ತು. ಆದರೆ ಶಾಸಕ ಪ್ರದೀಪ್ ಈಶ್ವರ್ ಒಂದು ದಿನ ತಡವಾಗಿ ಬಿಗ್‌ಬಾಸ್ ಮನೆ ಒಳಗೆ ಪ್ರವೇಶ ಮಾಡಿದ್ದರು. ತುಕಾಲಿ ಸಂತು, ‘ನಾವು ಒಬ್ಬ ಎಂ.ಎಲ್.ಎ ಜೊತೆ ಸ್ಪರ್ಧೆ ಮಾಡಬೇಕು’ ಎಂದು ಮಾತನಾಡಿದರೆ, ಅದಕ್ಕೆ ಪ್ರದೀಪ್, ‘ನಾವು ಸೋಲಬೇಕು ಅಂತಾನೆ ಬೆಂಗಳೂರಿಗೆ ಬಂದವನು’ ಎಂದು ಉತ್ತರಿಸಿದ್ದಾರೆ.
ಪ್ರದೀಪ್ ಈ ಸೀಸನ್‌ನ ಮೊದಲ ಅತಿಥಿಯಾಗಿ ಆಗಮಿಸಿ ಕಂಟೆಸ್ಟಂಟ್ಸ್‌ಗೆ ಟಾಸ್ಕ್ ಆಡಿಸಿ ಸಿಹಿ ನೀಡಿದರು. ಕೊನೆಗೆ ಪ್ರದೀಪ್ ಈಶ್ವರ್ ಬಿಗ್ ಬಾಸ್ ಆದೇಶದಂತೆ ಮನೆಯಿಂದ ಹೊರಬಂದರು.