Sunday, July 19, 2026
spot_imgspot_img
spot_imgspot_img

ಚಿಕ್ಕಬಳ್ಳಾಪುರ: ರಾಜೀವ್‌ ಗೌಡಗೆ ತಲೆಮರೆಸಿಕೊಳ್ಳಲು ಸಹಕರಿಸಿದ ಮಂಗಳೂರಿನ ಉದ್ಯಮಿ ಬಂಧನ..!

- Advertisement -
- Advertisement -

ಚಿಕ್ಕಬಳ್ಳಾಪುರ: ಶಿಡ್ಲಘಟ್ಟದ ನಗರಸಭೆ ಪೌರಾಯುಕ್ತೆ ಅಮೃತಗೌಡ ಅವರಿಗೆ ಧಮ್ಕಿ ಹಾಕಿದ್ದ ಕಾಂಗ್ರೆಸ್‌ ಮುಂಖಂಡ ರಾಜೀವ್ ಗೌಡ ಅವರಿಗೆ ತಲೆಮರೆಸಿಕೊಳ್ಳಲು ಸಹಕರಿಸಿದ್ದ ಆರೋಪಿಯನ್ನು ಚಿಕ್ಕಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಮಂಗಳೂರಿನ ಮೈಕಲ್ ಜೋಸೇಫ್ ರೆಗೋ ಎಂದು ತಿಳಿಸಿದ್ದಾರೆ. ಪಚ್ಚನಾಡಿ ಬಳಿ ಈತನಿಗೆ ಸೇರಿದ್ದ ಜೆ.ಕೆ ಫಾರ್ಮ್ ಹೌಸ್‌ನಲ್ಲಿ ರಾಜೀವ್ ಗೌಡ ತಲೆಮರೆಸಿಕೊಂಡಿದ್ದು, ಈ ಮಾಹಿತಿ ತಿಳಿದ ಚಿಕ್ಕಬಳ್ಳಾಪುರ ಪೊಲೀಸರು ಅಲ್ಲಿಗೆ ಹೊರಟಿದ್ದರು. ವಿಚಾರ ತಿಳಿದು ಆರೋಪಿ ರಾಜೀವ್‌ ಗೌಡ, ತನ್ನ ಕಾರನ್ನ ಮಂಗಳೂರು ಜಂಕ್ಷನ್ ರೈಲ್ವೇ ನಿಲ್ದಾಣದಲ್ಲಿ ಬಿಟ್ಟು ಮೈಕಲ್‌ನ ಕಾರಿನಲ್ಲಿ ಕೇರಳಕ್ಕೆ ತೆರಳಿದ್ದು, ಇಬ್ಬರನ್ನೂ ಪೊಲೀಸರು ಕೇರಳದಲ್ಲಿ ಬಂಧಿಸಿದ್ದಾರೆ.

ಸಚಿವ ಜಮೀರ್‌ ಪುತ್ರ ಝೈದ್‌ ಖಾನ್‌ ನಟನೆಯ ‘ಕಲ್ಟ್‌’ ಸಿನಿಮಾ ಫ್ಲೆಕ್ಸ್‌ ತೆರವುಗೊಳಿಸಿದ್ದಕ್ಕೆ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತ ಗೌಡಗೆ ರಾಜೀವ್‌ ಗೌಡ ಧಮ್ಕಿ ಹಾಕಿದ್ದ ಪರಿಣಾಮ ಆಡಿಯೋ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದಂತೆ ಕ್ಷಮೆ ಕೋರಿದ್ದ. ಆದರೆ ಅಮೃತ ಗೌಡ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಾದ ಬಳಿಕ ಪರಾರಿಯಾಗಿದ್ದ ರಾಜೀವ್‌ ಜಾಮೀನು ಪಡೆಯಲು ನಾನಾ ಕಸರತ್ತು ನಡೆಸಿದ್ದ. ಕೋರ್ಟ್‌ ಜಾಮೀನು ವಜಾಗೊಳಿಸಿದ ಬೆನ್ನಲ್ಲೇ 13 ದಿನಗಳ ಬಳಿಕ ಜ.26 ರಂದು ರಾಜೀವ್‌ ಗೌಡ ಬಂಧನಕ್ಕೊಳಗಾಗಿದ್ದಾರೆ.

- Advertisement -

Related news

error: Content is protected !!