- Advertisement -
- Advertisement -
ಮುಂಬೈ: ಕುಖ್ಯಾತ ಗ್ಯಾಂಗ್ ಸ್ಟರ್ ವಿಕಾಸ್ ದುಬೆ ಎನ್ ಕೌಂಟರ್ ಬೆನ್ನಲ್ಲೇ ಆತನ ಭಂಟ ಗುದ್ದನ್ ತ್ರಿವೇದಿಯನ್ನು ಮಹಾರಾಷ್ಟ್ರದಲ್ಲಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕಾನ್ಪುರದಲ್ಲಿ ನಡೆದ 8 ಪೊಲೀಸರ ಹತ್ಯೆ ಪ್ರಕರಣದಲ್ಲಿ ಈತನೂ ಪ್ರಮುಖ ಆರೋಪಿಯಾಗಿದ್ದ.
ಘಟನೆ ಬಳಿ ತಲೆಮರೆಸಿಕೊಂಡಿದ್ದ ಈತ ಮಹಾರಾಷ್ಟ್ರದಲ್ಲಿ ಅವಿತುಕೊಂಡಿದ್ದ. ಹೀಗಾಗಿ ಖಚಿತ ಮಾಹಿತಿ ಮೇರೆಗೆ ಈತನನ್ನು ಬಂಧಿಸಲಾಗಿದೆ. ಈತನ ಕಾರು ಚಾಲಕನನ್ನೂ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
2001ರಲ್ಲಿ ಉತ್ತರಪ್ರದೇಶದ ಮಂತ್ರಿಯಾಗಿದ್ದ ಸಂತೋಷ್ ಶುಕ್ಲಾ ಕೊಲೆ ಪ್ರಕರಣದಲ್ಲಿ ವಿಕಾಸ್ ದುಬೆ ಜತೆ ಈತನೂ ಭಾಗಿಯಾಗಿದ್ದ.ಈ ಪ್ರಕರಣದ ಜತೆಗೆ ಈತನ ಮೇಲೆ ಅನೇಕ ಕೇಸ್ ಗಳಿವೆ ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ದೊರೆತಿದೆ.
- Advertisement -