





ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಮುತ್ತಿಗೆಪುರ ಕುಗ್ರಾಮದ ಸರ್ಕಾರಿ ಶಾಲೆ 32 ಮಕ್ಕಳನ್ನ ಫ್ಲೈಟ್‍ನಲ್ಲಿ ಪ್ರವಾಸಕ್ಕೆ ಕರೆದೊಯ್ದಿದ್ದಾರೆ.ಈವರೆಗೆ ಯಾವ ಖಾಸಗಿ ಶಾಲೆಯೂ ಮಾಡದ ಹೊಸದೊಂದು ಸಾಧನೆ ಮಾಡಿ ಸರ್ಕಾರಿ ಶಾಲೆಯ ಮಕ್ಕಳ ಮುಖದಲ್ಲಿ ಹೊಸದೊಂದು ನಗು ಕಂಡಿದೆ.
ಮುತ್ತಿಗೆಪುರ ಗ್ರಾಮದ ಸರ್ಕಾರಿ ಶಾಲೆಯಲ್ಲಿ 420 ಜನ ಮಕ್ಕಳಿದ್ದಾರೆ. ಕೆಲ ಪೋಷಕರು ಮಕ್ಕಳನ್ನ ಕಳಿಸಲ್ಲ ಎಂದಿದ್ದಾರೆ. ಕೆಲವರು ಸಣ್ಣ ಮಕ್ಕಳು ಬೇಡ ಎಂದಿದ್ದಾರೆ. ಪೋಷಕರ ಒಪ್ಪಿಗೆ ಮೇರೆಗೆ ಶಿಕ್ಷಕರು 32 ಜನ ಮಕ್ಕಳನ್ನ ಫ್ಲೈಟ್‍ನಲ್ಲಿ ಪ್ರವಾಸಕ್ಕೆ ಕರೆದೊಯ್ದು ಸರ್ಕಾರಿ ಶಾಲೆ ಯಾರಿಗೂ-ಯಾವುದಕ್ಕೂ ಕಡಿಮೆ ಇಲ್ಲ ಅನ್ನೋದನ್ನ ನಿರೂಪಿಸಿದ್ದಾರೆ. ಈ ಫ್ಲೈಟ್ ಪ್ರವಾಸದಿಂದ ಮಕ್ಕಳು-ಪೋಷಕರು ಕೂಡ ಫುಲ್ ಖುಷ್ ಆಗಿದ್ದಾರೆ. ಮಕ್ಕಳು ಕೂಡಾ ಖುಷಿಯಿಂದ ಸ್ನೇಹಿತರನ್ನ ಫ್ಲೈಟ್ ನಲ್ಲಿ ಪ್ರವಾಸಕ್ಕೆ ಕಳಿಸಿ ಖುಷಿ ಪಟ್ಟಿದ್ದಾರೆ.
ಮಕ್ಕಳ ಈ ಫ್ಲೈಟ್ ಪ್ರವಾಸಕ್ಕೆ ಶಾಲೆಯ ದೈಹಿಕ ಶಿಕ್ಷಕ ಸುರೇಶ್ ಎಂಬುವರೇ 60 ಸಾವಿರ ಹಣ ಹಾಕಿ ಮಕ್ಕಳನ್ನ ಕರೆದೊಯ್ದಿದ್ದಾರೆ. ಶಾಲೆಯ ಓರ್ವ ವಿದ್ಯಾರ್ಥಿಗೆ ಪೋಷಕರೇ ಇಲ್ಲ. ಆತನಿಗೆ ಪ್ರವಾಸಕ್ಕೆ ಹೋಗೋದಕ್ಕೆ ಆಸೆ ಇತ್ತು. 4-5 ಶಿಕ್ಷಕರು-ದಾನಿಗಳು ಹಣ ಹಾಕಿ ಆ ವಿದ್ಯಾರ್ಥಿಯನ್ನು ಫ್ಲೈಟ್ ನಲ್ಲಿ ಪ್ರವಾಸಕ್ಕೆ ಕಳಿಸಿದ್ದಾರೆ. ಒಂದು ಟಿಕೆಟ್ ಹತ್ರತ್ರ 4,000 ರೂ. ಹಣ ಇದೆ. 32 ಮಕ್ಕಳಿಗೆ ಒಂದೂಕಾಲು ಲಕ್ಷಕ್ಕಿಂತ ಹೆಚ್ಚು ಹಣವಾಗಲಿದೆ. ಮಕ್ಕಳ ಖುಷಿಗಿಂತ ದೊಡ್ಡದ್ದು ಯಾವುದೂ ಇಲ್ಲ ಎಂದು ಶಿಕ್ಷಕರ ಕೂಡ ಹಣ ಹಾಕಿ ಮಕ್ಕಳನ್ನ ಪ್ರವಾಸಕ್ಕೆ ಕಳಿಸಿದ್ದಾರೆ.








