Wednesday, November 4, 2026
spot_imgspot_img
spot_imgspot_img

SC/ST ಮೀಸಲು ಕ್ಷೇತ್ರಗಳ ಆವರ್ತನ ಕೋರಿಕೆ: ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

- Advertisement -
- Advertisement -

ಹೊಸದಿಲ್ಲಿ: ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡಗಳಿಗೆ (ಎಸ್‌ಟಿ) ಕಾಯ್ದಿರಿಸಲಾದ ಕ್ಷೇತ್ರಗಳ ಕಡ್ಡಾಯ ರೊಟೇಷನ್ (ಆವರ್ತನ) ವ್ಯವಸ್ಥೆಗೆ ಕೋರಿದ ಬೇಡಿಕೆಯು ಶಾಸಕಾಂಗಕ್ಕೆ ಸಂಬಂಧಿಸಿದ ವಿಷಯವಾಗಿದೆಯೇ ಹೊರತು ನ್ಯಾಯಾಂಗಕ್ಕಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಬುಧವಾರ ಅರ್ಜಿದಾರರಿಗೆ ತಿಳಿಸಿದೆ.’ಅರ್ಜಿದಾರರು ತಪ್ಪು ಸಂಖ್ಯೆಗೆ ಕರೆ ಮಾಡುತ್ತಿದ್ದಾರೆ’ ಎಂದು ಹೇಳಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿಗಳಾದ ಜಾಯಮಾಲ್ಯ ಬಾಗ್ನಿ ಮತ್ತು ವಿ.ಮೋಹನಾ ಅವರ ಪೀಠವು, ಕಾನೂನಿನಲ್ಲಿ ಬದಲಾವಣೆ ತರಲು ಒಮ್ಮತ ಮೂಡಿಸಲು ಚುನಾಯಿತ ಜನಪ್ರತಿನಿಧಿಗಳನ್ನು ಸಂಪರ್ಕಿಸುವಂತೆ ಸಲಹೆ ನೀಡಿತು.ಅಲಹಾಬಾದ್‌ ಉಚ್ಚ ನ್ಯಾಯಾಲಯದ ತೀರ್ಪಿನಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿದ ಪೀಠವು, 2002ರ ಕ್ಷೇತ್ರ ಪುನರ್ವಿಂಗಡಣೆ ಕಾಯ್ದೆಯ ಕಲಂ 9(1)(ಸಿ)ಯ ಸಿಂಧುತ್ವವನ್ನು ಎತ್ತಿಹಿಡಿಯಿತು. ಈ ಕಲಂ ಪರಿಶಿಷ್ಟ ಜಾತಿ/ಪಂಗಡದ ಜನರ ಜನಸಂಖ್ಯೆ ಹೆಚ್ಚಿರುವ ಪ್ರದೇಶಗಳಲ್ಲಿ ಮಾತ್ರ ಕಾಯ್ದಿರಿಸಿದ ಕ್ಷೇತ್ರಗಳನ್ನು ಗುರುತಿಸುವುದನ್ನು ಕಡ್ಡಾಯಗೊಳಿಸುತ್ತದೆ.

ಆದರೆ ಈ ಕಾಯ್ದೆಯಲ್ಲಿ ಅಂತಹ ಕ್ಷೇತ್ರಗಳನ್ನು ಕಾಲಕಾಲಕ್ಕೆ ಸರದಿ ಆಧಾರದಲ್ಲಿ ಬದಲಾಯಿಸುವ ಯಾವುದೇ ಕಡ್ಡಾಯ ನಿಯಮವಿಲ್ಲ.ಹೆಚ್ಚಿನ ಪರಿಶಿಷ್ಟ ಜಾತಿ/ಪಂಗಡದ ಜನಸಾಂದ್ರತೆ ಆಧಾರದ ಮೇಲೆ ಕಾಯ್ದಿರಿಸಿದ ಕ್ಷೇತ್ರಗಳನ್ನು ಗುರುತಿಸುವುದು ಜಾತಿ ವಿಭಜನೆಯನ್ನು ಮುಂದುವರಿಸುತ್ತದೆಯೇ ಎಂಬ ಪ್ರಶ್ನೆಯನ್ನು ಶಾಸಕಾಂಗವೇ ಪರಿಶೀಲಿಸಬೇಕು ಮತ್ತು ಈ ಕಾರಣದಿಂದ ಮಾತ್ರ ಪ್ರಸ್ತುತ ಇರುವ ಕಾನೂನನ್ನು ಅಸಾಂವಿಧಾನಿಕ ಎಂದು ಹೇಳಲಾಗುವುದಿಲ್ಲ ಎಂದು ನ್ಯಾಯಾಲಯವು ಸ್ಪಷ್ಟಪಡಿಸಿತು.ಅರ್ಜಿದಾರರು ಜನಪ್ರತಿನಿಧಿಗಳನ್ನು ಸಂಪರ್ಕಿಸಿ ಶಾಸನದ ಮೂಲಕ ರೊಟೇಷನ್ ನಿಯಮವನ್ನು ಜಾರಿಗೆ ತರಲು ಒಮ್ಮತ ಮೂಡಿಸಲು ಪ್ರಯತ್ನಿಸಬಹುದು ಎಂದು ಸುಪ್ರೀಂ ಕೋರ್ಟ್ ಪುನರುಚ್ಚರಿಸಿತು.

- Advertisement -

Related news

error: Content is protected !!