Friday, May 3, 2024
spot_imgspot_img
spot_imgspot_img

ಮಹಾರಾಷ್ಟ್ರದ ಜಲ್ಗಾನ್ ಜಿಲ್ಲೆಯಲ್ಲಿ ಅಕ್ಟೋಬರ್ 15 ರಂದು ನಾಲ್ಕು ಪುಟಾಣೆಗಳ ಹತ್ಯೆ-ಈ ಪ್ರಕರಣದಲ್ಲಿ ಅತ್ಯಾಚಾರವೂ ನಡೆದಿದೆಯೆಂದು ಪೊಲೀಸರ ಅನುಮಾನ

- Advertisement -G L Acharya panikkar
- Advertisement -

ಮಹಾರಾಷ್ಟ್ರ: ಉತ್ತರ ಮಹಾರಾಷ್ಟ್ರದ ಜಲ್ಗಾನ್ ಜಿಲ್ಲೆಯಲ್ಲಿ ಭಯಾನಕ ಅಪರಾಧವೊಂದು ವರದಿಯಾಗಿದ್ದು ಅಕ್ಟೋಬರ್ 15 ರಂದು ನಾಲ್ಕು ಪುಟಾಣೆಗಳ ಹತ್ಯೆ ನಡೆದಿತ್ತು. ಇದೀಗ ಆ ಪ್ರಕರಣದಲ್ಲಿ ಅತ್ಯಾಚಾರವೂ ನಡೆದಿದೆಯೆಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

13 , 6 ವರ್ಷದ ಹೆಣ್ಣು ಮಕ್ಕಳು ಮತ್ತು 1,8 ವರ್ಷದ ಇಬ್ಬರು ಗಂಡು ಮಕ್ಕಳ ಮೇಲೆ ಅತ್ಯಾಚಾರ ನಡೆಸಿದ ಮೇಲೆ ಕೊಂದು ಹಾಕಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಪೊಲೀಸರು ಅಪರಾಧಿಗಳಿಗೆ ಶೋಧ ಕಾರ್ಯ ಮುಂದುವರಿಸಿದ್ದು ಇನ್ಸ್ಪೆಕ್ಟರ್ ಪ್ರತಾಪ್ ದಿವಾಕರ್ ಅವರ ಪ್ರಕಾರ ಅದಷ್ಟು ಶೀಘ್ರ ಅಪರಾಧಿಗಳನ್ನು ಬಂಧಿಸಲಾಗುವುದೆಂದು ಹೇಳಿದ್ದಾರೆ.

ಮಕ್ಕಳ ತಂದೆ ತಾಯಿ ಕಾರ್ಯಕ್ರಮವೊಂದಕ್ಕೆ ತೆರಳಿದ್ದರು. ಮಕ್ಕಳು ಸಣ್ಣವರಾದ ಕಾರಣ ವ್ಯಕ್ತಿಯೊಬ್ಬರ ಬಳಿ ನೋಡಿಕೊಳ್ಳಲು ಹೇಳಿ ತೆರಳಿದ್ದರು ಇದೀಗ ಆತನೇ ಈ ಕೃತ್ಯ ಎಸಗಿರುವ ಸಾಧ್ಯತೆಯ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಪೋಸ್ಕೊ ಕಾಯಿದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅತ್ಯಾಚಾರ ಮತ್ತು ಹತ್ಯಾ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.

- Advertisement -

Related news

error: Content is protected !!