Saturday, June 28, 2025
spot_imgspot_img
spot_imgspot_img

ಮಂಗಳೂರು: ಮಕ್ಕಳನ್ನು ಕಡಿಮೆ ಹಣಕ್ಕೆ ಖರೀದಿಸಿ ಅಧಿಕ ಹಣಕ್ಕೆ ಕಾನೂನು ಬಾಹಿರವಾಗಿ ಮಾರಾಟ ಜಾಲ- ಜಾಲವನ್ನು ಬೇಧಿಸುವಲ್ಲಿ ಮಂಗಳೂರು ಪೊಲೀಸರು ಸಕ್ಸಸ್, ಓರ್ವನ ಬಂಧನ!

- Advertisement -
- Advertisement -

ಮಂಗಳೂರು: ಮಕ್ಕಳನ್ನು 3 ಲಕ್ಷಕ್ಕೆ ಖರೀದಿಸಿ ಆರು ಲಕ್ಷಕ್ಕೂ ಅಧಿಕ ಹಣಕ್ಕೆ ಕಾನೂನು ಬಾಹಿರವಾಗಿ ಮಾರಾಟ ಮಾಡುತ್ತಿದ್ದ ಜಾಲವೊಂದನ್ನು ಬೇಧಿಸುವಲ್ಲಿ ಮಂಗಳೂರು ಪೊಲೀಸರು ಸಕ್ಸಸ್ ಆಗಿದ್ದು, ಓರ್ವನನ್ನು ವಶಕ್ಕೆ ಪಡೆದಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಮೂಲದ ರಿಯಾನ್(30 ವರ್ಷ) ಎಂಬಾತ ಬಂಧಿತ ಆರೋಪಿ. ಹಾಸನ ಮೂಲದ ಹೆಣ್ಣು ಮಗುವೊಂದನ್ನು ಕಾರ್ಕಳ ಮೂಲದ ಕವಿತಾ ಎಂಬವರಿಗೆ ರಿಯಾನ್ ಮಾರಾಟ ಮಾಡಿದ್ದು, ಈ ಕುರಿತು ಮೈಸೂರಿನ ಒಡನಾಡಿ ಸಂಸ್ಥೆ ನೀಡಿದ ದೂರಿನ ಆಧಾರದ ಹಿನ್ನೆಲೆಯಲ್ಲಿ ಪ್ರಕರಣದ ಜಾಡು ಹಿಡಿದು ಹೊರಟ ಪೊಲೀಸರು ಆರೋಪಿಯನ್ನು ಬಂಧಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.

ರಿಯಾನ್ ಕೇವಲ ಒಂದು ಮಗುವನ್ನಷ್ಟೇ ಮಾರಾಟ ಮಾಡಿದ್ದಾನೆಯೆ ಅಥವಾ ಮಕ್ಕಳ ಮಾರಾಟದ ಹಿಂದೆ ವ್ಯವಸ್ಥಿತ ಜಾಲವಿದೆಯೇ ಅನ್ನೋ ಬಗ್ಗೆಯೂ ಪೊಲೀಸರು ವಿಚಾರಣೆಯನ್ನು ನಡೆಸುತ್ತಿದ್ದಾರೆ. ತನಿಖೆಯ ನಂತರವಷ್ಟೇ ಮಕ್ಕಳ ಮಾರಾಟ ಜಾಲದ ಕುರಿತು ಮಾಹಿತಿ ಹೊರಬರಲಿದೆ.

- Advertisement -

Related news

error: Content is protected !!