Saturday, June 28, 2025
spot_imgspot_img
spot_imgspot_img

ಮಕ್ಕಳ ಆಟಿಕೆಗಳ ಮೂಲಕ ಡ್ರಗ್ಸ್ ಪೂರೈಕೆ..!

- Advertisement -
- Advertisement -

ಬೆಂಗಳೂರಿನಲ್ಲಿ ಬರೋಬ್ಬರಿ 2 ಕ್ವಿಂಟಾಲ್ ಡ್ರಗ್ಸ್ ಅನ್ನು ಸಿಸಿಬಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಸದ್ಯ ವಿಚಾರಣೆ ನಡೆಯುತ್ತಿದ್ದು ಅಚ್ಚರಿಯ ಸಂಗತಿಗಳು ಬೆಳಕಿಗೆ ಬರುತ್ತಿದೆ. ಮರದ ಹಾಗೂ ರಟ್ಟಿನ ಬಾಕ್ಸ್ ಗಳಲ್ಲಿ ಮಕ್ಕಳ ಆಟಿಕೆ ವಸ್ತುಗಳ ಮೂಲಕ ಡ್ರಗ್ಸ್ ಸರಬರಾಜು ಮಾಡುತ್ತಿದ್ದರು ಎಂಬ ಸಂಗತಿ ಬೆಳಕಿಗೆ ಬಂದಿದೆ.

ಜರ್ಮನಿ, ಬೆಲ್ಜಿಯಂ ದೇಶಗಳಿಂದ ಡ್ರಗ್ಸ್ ಸಪ್ಲೈ ಆಗುತ್ತಿತ್ತು. ಮಕ್ಕಳ ಗೊಂಬೆಗಳ ಗಿಫ್ಟ್ ಬಾಕ್ಸ್ ಗ್ರಾಹಕರಿಗೆ ನೇರವಾಗಿ ರವಾನೆ ಮಾಡಲಾಗುತ್ತಿತ್ತು. ಡಾರ್ಕ್ ವೆಬ್ನ ಮೂಲಕ ಬುಕ್ ಮಾಡಿ ಬಿಟ್ ಕಾಯಿನ್ ಮೂಲಕ ಹಣ ಸಂದಾಯ ಮಾಡಲಾಗುತ್ತಿತ್ತು. ದೊಡ್ಡ ಗುಬ್ಬಿಯ ತನ್ನ ಮನೆಯಲ್ಲಿ ಡ್ರಗ್ಸ್ ಸಂಗ್ರಹಿಸಿದ್ದ ಅನಿಕಾ ಎಂಬಾಕೆ ಕೆ. ರೆಹಮಾನ್ ಎಂಬ ವ್ಯಕ್ತಿಯ ಹೆಸರಲ್ಲಿ ಬುಕ್ಕಿಂಗ್ ಮಾಡುತ್ತಿದ್ದಳು. ಬೆಂಗಳೂರಿನಲ್ಲಿರುವ ಅಂತಾರಾಷ್ಟ್ರೀಯ ಅಂಚೆ ಕಚೇರಿಗೆ ಬರುತ್ತಿದ್ದ ಡ್ರಗ್ಸ್ ಅನ್ನು ರೆಹಮಾನ್ ಪಡೆದುಕೊಂಡು, ಅದನ್ನು ಅನಿಕಾ, ಅನೂಪ್ ಹಾಗೂ ರಾಜೇಶ್ ಗೆ ಸರಬರಾಜು ಮಾಡುತ್ತಿದ್ದ.

ಆರೋಪಿ ರೆಹಮಾನ್ ಬೆಂಗಳೂರಿನ ಕಾಲೇಜುವೊಂದರ ವಿದ್ಯಾರ್ಥಿ. ಈತ ವಿದ್ಯಾರ್ಥಿಗಳಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದ. ಇದೀಗ ತಲೆಮರೆಸಿಕೊಂಡಿರುವ ರೆಹಮಾನ್ಗೆ ಹುಡುಕಾಟ ನಡೆಯುತ್ತಿದೆ. ಅನಿಕಾ, ಅನೂಪ್ ಹಾಗೂ ರಾಜೇಶ್ ಅವರಿಂದ ಡ್ರಗ್ ಪಡೆಯುತ್ತಿದ್ದವರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

- Advertisement -

Related news

error: Content is protected !!