- Advertisement -
- Advertisement -
ನವದೆಹಲಿ: ಕಳೆದ ತಿಂಗಳು ಚೀನಾದ 59 ಆ್ಯಪ್ ಗಳನ್ನು ಭಾರತದಲ್ಲಿ ಬ್ಯಾನ್ ಮಾಡಿದ ಬಳಿಕ, ಮತ್ತೆ ಚೀನಾದ 47 ಆ್ಯಪ್ ಗಳನ್ನು ನಿಷೇಧಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಗಡಿಯಲ್ಲಿ ಚೀನಾದ ಕ್ಯಾತೆ ಹೆಚ್ಚಾದ ಹಿನ್ನಲೆಯಲ್ಲಿ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ಈ ಮೂಲಕ ಚೀನಾದ 106 ಆ್ಯಪ್ ಗಳು ಭಾರತದಲ್ಲಿ ಬ್ಯಾನ್ ಆಗಿದೆ.
ಇನ್ನು ನಿಷೇಧಿಸಲಾಗಿರುವ 47 ಆ್ಯಪ್ ಗಳ ಪಟ್ಟಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ತಿಳಿಸಿದೆ. ಸರ್ಕಾರದ ಮೂಲಗಳ ಪ್ರಕಾರ ಉನ್ನತ ಗೇಮಿಂಗ್ ಅಪ್ಲಿಕೇಷನ್ಸ್ ಗಳು ಸಹ ನಿಷೇಧದ ಪಟ್ಟಿದೆಯಲ್ಲಿದೆ ಎಂದು ತಿಳಿದುಬಂದಿದೆ.
250 ಚೀನಿ ಆ್ಯಪ್ ಗಳ ಪರಿಶೀಲನೆ:
ಇನ್ನೂ 250 ಚೀನಾದ ಆ್ಯಪ್ ಗಳನ್ನು ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಪರಿಶೀಲನೆ ನಡೆಸುತ್ತಿದೆ. ಬಳಕೆದಾರರ ಗೌಪ್ಯತೆ ಹಾಗೂ ರಾಷ್ಟ್ರೀಯ ಭದ್ರತೆ ಉಲ್ಲಂಘನೆ ಹಿನ್ನಲೆಯಲ್ಲಿ 47 ಆ್ಯಪ್ ಗಳನ್ನು ನಿಷೇಧಿಸುವ ಮೂಲಕ ಭಾರತ ಚೀನಾಗೆ ಬಿಸಿ ಮುಟ್ಟಿಸಿದೆ.
- Advertisement -