Saturday, May 18, 2024
spot_imgspot_img
spot_imgspot_img

15 ಸ್ಥಳಗಳ ಹೆಸರು ಬದಲಿಸಿದ ಚೀನಾ..! ಡ್ರ್ಯಾಗನ್ ದೇಶದ ನಿರ್ಧಾರ ತಿರಸ್ಕರಿಸಿದ ಭಾರತ

- Advertisement -G L Acharya panikkar
- Advertisement -
vtv vitla
vtv vitla
suvarna gold

ಅರುಣಾಚಲ ಪ್ರದೇಶದ 15 ಸ್ಥಳಗಳ ಹೆಸರು ಬದಲಿಸಿರುವ ಚೀನಾದ ನಿರ್ಣಯವನ್ನು ಭಾರತವು ತಳ್ಳಿಹಾಕಿದೆ. ಅರುಣಾಚಲ ಪ್ರದೇಶವು ಈಗಲೂ ಭಾರತದ ಅವಿಭಾಜ್ಯ ಅಂಗವಾಗಿದೆ. ಮುಂದೆಯೂ ಆಗಿರುತ್ತದೆ. ಬೇರೆ ಹೆಸರುಗಳನ್ನು ಇಡುವುದರಿಂದ ಆ ಸತ್ಯವನ್ನು ಬದಲಿಸಲು ಸಾಧ್ಯ ಆಗುವುದಿಲ್ಲ ಎಂದು ತಿರುಗೇಟು ನೀಡಿದೆ.

ಝಂಗಾ0ಗ್ ಅಥವಾ ದಕ್ಷಿಣ ಷಿಝಾಂಗ್‌ನ (ಟಿಬೆಟ್ ಸ್ವಾಯತ್ತ ಪ್ರದೇಶದ) 15 ಸ್ಥಳಗಳಿಗೆ ಮ್ಯಾಂಡರಿನ್ ಭಾಷೆಯ ಹೆಸರು ಇರಿಸಲಾಗಿದೆ ಎಂದು ಚೀನಾದ ಸರ್ಕಾರಿ ಸ್ವಾಮ್ಯದ ಪತ್ರಿಕೆ ಗ್ಲೋಬಲ್ ಟೈಮ್ಸ್ ವರದಿ ಮಾಡಿತ್ತು. ಇದರ ಬೆನ್ನಲ್ಲೇ ಭಾರತ ಪ್ರತಿಕ್ರಿಯಿಸಿದೆ.

ಇದನ್ನೂ ಓದಲೇ ಬೇಕು: ಡ್ರ‍್ಯಾಗನ್ ದೇಶದ ಮುಖವಾಡ ಕಳಚಿದ ದೊಡ್ಡಣ್ಣ..! ನಿಯಂತ್ರಣ ರೇಖೆ ಬಳಿ ಗ್ರಾಮ ನಿರ್ಮಿಸಿ ನರಿ ಬುದ್ದಿ ತೋರಿಸಿದ ಚೀನಾ

ವಿದೇಶಾಂಗ ಇಲಾಖೆಯ ವಕ್ತಾರ ಅರಿಂದಮ್ ಬಾಗ್ಚಿ

‘ಇಂತಹವುಗಳನ್ನು ನಾವು ನೋಡಿದ್ದೇವೆ. ಚೀನಾ, ಅರುಣಾಚಲ ಪ್ರದೇಶದ ಹೆಸರುಗಳನ್ನು ಬದಲಿಸುವ ಕೆಲಸ ಮಾಡುತ್ತಿರುವುದು ಇದೇ ಮೊದಲೇನಲ್ಲ. 2017ರಲ್ಲಿಯೂ ಹೆಸರು ಬದಲಾವಣೆಗೆ ಪ್ರಯತ್ನಿಸಿತ್ತು. ಅರುಣಾಚಲ ಪ್ರದೇಶವು ಈಗಲೂ ಮತ್ತು ಇನ್ನು ಮುಂದೆಯೂ ಭಾರತದ ಅವಿಭಾಜ್ಯ ಅಂಗವಾಗಿರಲಿದೆ. ರಾಜ್ಯದ ಕೆಲವು ಸ್ಥಳಗಳಿಗೆ ಮರುನಾಮಕರಣ ಮಾಡುವುದರಿಂದ ಸತ್ಯವನ್ನು ಬದಲಿಸಲು ಸಾಧ್ಯವಿಲ್ಲ’ ಎಂದು ವಿದೇಶಾಂಗ ಇಲಾಖೆಯ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ.

ಪೂರ್ವ ಲಡಾಖ್‌ನ ಗಡಿಯಲ್ಲಿ ಭಾರತ-ಚೀನಾ ಸೈನಿಕರ ನಡುವೆ 20 ತಿಂಗಳಿ0ದ ಸಂಘರ್ಷ ನಡೆಯುತ್ತಿದ್ದು, ಅದರ ನಡುವಲ್ಲಿಯೇ ಚೀನಾ ಈ ಕ್ರಮ ಕೈಗೊಂಡಿದೆ. ಈಶಾನ್ಯದ ಈ ರಾಜ್ಯದ ಮೇಲೆ ತನಗೆ ಹಕ್ಕು ಇದೆ ಎಂಬುದನ್ನು ತೋರಿಸುವ ಉದ್ದೇಶದಿಂದ ಚೀನಾ ಈ ರೀತಿ ಮಾಡಿದೆ.

vtv vitla
vtv vitla
- Advertisement -

Related news

error: Content is protected !!