Friday, April 26, 2024
spot_imgspot_img
spot_imgspot_img

ನಿಯಂತ್ರಣ ಕಳೆದುಕೊಂಡ ಚೀನಾದ ಅತೀ ದೊಡ್ಡ ರಾಕೆಟ್..! ಹಿಂದೂ ಮಹಾಸಾಗರಕ್ಕೆ ಬಿದ್ದ ಅವಷೇಶ

- Advertisement -G L Acharya panikkar
- Advertisement -

ಚೀನಾದ ಅತಿದೊಡ್ಡ ರಾಕೆಟ್ ‘ಲಾಂಗ್ ಮಾರ್ಚ್ 5 ಬಿ’ಯ ಅವಶೇಷಗಳು ಇಂದು ಬೆಳಿಗ್ಗೆ ಹಿಂದೂ ಮಹಾಸಾಗರಕ್ಕೆ ಬಂದು ಬಿದ್ದಿವೆ. ಭೂಮಿಯ ವಾತಾವರಣಕ್ಕೆ ಮರು ಪ್ರವೇಶಿಸಿದ ನಂತರ ಈ ರಾಕೆಟ್ ನ ಹೆಚ್ಚಿನ ಭಾಗಗಳು ನಾಶವಾಗಿದೆ. ಉಳಿದ ಅವಶೇಷಗಳು ಮಾಲ್ಡೀವ್ಸ್ ದ್ವೀಪಸಮೂಹದ ಪಶ್ಚಿಮಕ್ಕೆ ಹಿಂದೂ ಸಾಗರದ ಪಾಲಾಗಿವೆ. ಅವುಗಳಿಂದ ಯಾವುದೇ ಹಾನಿ ಸಂಭವಿಸುವುದಿಲ್ಲ ಎಂದು ಚೀನಾದ ಬಾಹ್ಯಾಕಾಶ ವಿಜ್ಞಾನಿಗಳು ಹೇಳಿದ್ದಾರೆಂದು ಚೀನಾ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ಲಾಂಗ್ ಮಾರ್ಚ್ 5 ಬಿಯ ಭಾಗಗಳು ಬೀಜಿಂಗ್ ಸಮಯ ಬೆಳಿಗ್ಗೆ 10:24 ಕ್ಕೆ (02:24 ಜಿಎಂಟಿ) ಮತ್ತೆ ಭೂಮಿಯ ವಾತಾವರಣಕ್ಕೆ ಪ್ರವೇಶಿಸಿ ಲಾಂಗಿಟ್ಯೂಡ್ 72.47 ಡಿಗ್ರಿ ಪೂರ್ವ ಮತ್ತು ಲಾಟಿಟ್ಯೂಡ್ 2.65 ಡಿಗ್ರಿ ಉತ್ತರಕ್ಕೆ ಬಂದಿಳಿದವು ಎಂದು ಚೀನಾ ಮ್ಯಾನ್ಡ್ ಸ್ಪೇಸ್ ಎಂಜಿನಿಯರಿಂಗ್ ಕಛೇರಿ ಹೇಳಿದೆ ಎನ್ನಲಾಗಿದೆ. ಏಪ್ರಿಲ್ 29 ರಂದು ಚೀನಾದ ಹೈನಾನ್ ದ್ವೀಪದಿಂದ ಲಾಂಚ್ ಆಗಿದ್ದ ಈ ರಾಕೆಟ್‍ನ ಅವಶೇಷಗಳು ಎಲ್ಲಿಗೆ ಬಂದು ಬೀಳುತ್ತವೆ ಎಂಬ ಆಘಾತ ಮತ್ತು ಕಾಳಜಿ ಹಲವು ದೇಶಗಳ ಬಾಹ್ಯಾಕಾಶ ವಿಜ್ಞಾನಿಗಳ ನಿದ್ದೆ ಕೆಡಿಸಿತ್ತು ಎನ್ನಲಾಗಿದೆ.

ಕಳೆದ ವಾರ ಲಾಂಚ್ ಮಾಡಲಾಗಿದ್ದ ಲಾಂಗ್ ಮಾರ್ಚ್ ರಾಕೆಟ್, ಚೀನಾದ ಹೊಸ ಸ್ಪೇಸ್ ಸ್ಟೇಷನ್ಅನ್ನು ಬಾಹ್ಯಾಕಾಶಕ್ಕೆ ಹೊತ್ತೊಯ್ದಿದ್ದ 5ಬಿ ಸರಣಿಯ ಎರಡನೇ ವಾಹನವಾಗಿತ್ತು. ಕಳೆದ ವರ್ಷ ಇದೇ ತೆರನ ರಾಕೆಟ್? ಮೇ 2020 ರಲ್ಲಿ ಲಾಂಚ್ ಆಗಿದ್ದಾಗ ಅದರ ಅವಶೇಷಗಳು ಐವರಿ ಕೋಸ್ಟ್ನ ಮೇಲೆ ಬಿದ್ದು ಹಲವು ಕಟ್ಟಡಗಳಿಗೆ ಹಾನಿ ಮಾಡಿತ್ತು. ಆದ್ದರಿಂದ ಈ ಬಾರಿ ಚೀನಾ ರಾಕೆಟ್ ಹಾರಿಸಿದಾಗಿನಿಂದ ಅದರ ಅವಶೇಷಗಳು ಎಲ್ಲಿಗೆ ಬಂದು ಬೀಳುತ್ತವೆ ಎಂದು ಹಲವು ದೇಶಗಳು ಗಮನಿಸುತ್ತಿದ್ದವು ಎನ್ನಲಾಗಿದೆ.

ಈ ರಾಕೆಟ್ ಅನ್ನು ಟ್ರ್ಯಾಕ್ ಮಾಡುತ್ತಿದ್ದ ಅಮೆರಿಕದ ಸ್ಪೇಸ್ ಕಮಾಂಡ್, ನಿಯಂತ್ರಣ ಕಳೆದುಕೊಂಡ ಚೀನಾದ ಲಾಂಗ್ ಮಾರ್ಚ್ 5ಬಿ ರಾಕೆಟ್ ಇಂಡಿಯಾ ಟೈಮ್? ಭಾನುವಾರ ಬೆಳಿಗ್ಗೆ 7.45 ಕ್ಕೆ ಅರೇಬಿಯನ್ ಪೆನಿನ್ಸುಲಾವನ್ನು ಪ್ರವೇಶಿಸಿದೆ’ ಎಂದು ಎಚ್ಚರಿಕೆ ನೀಡಿತ್ತು ಎನ್ನಲಾಗಿದೆ. 100 ಅಡಿ ಎತ್ತರ ಮತ್ತು 22 ಮೆಟ್ರಿಕ್ ಟನ್? ತೂಕದ ರಾಕೆಟ್ ಅವಶೇಷಗಳು ಬಿದ್ದಿವೆ ಎಂದು ಅಮೆರಿಕ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

- Advertisement -

Related news

error: Content is protected !!