Thursday, April 25, 2024
spot_imgspot_img
spot_imgspot_img

ನಟಿ ವಿಜೆ ಚಿತ್ರಾ ಆತ್ಮಹತ್ಯೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್: ಪತಿ ಹೇಮಂತ್ ಬಂಧನ!

- Advertisement -G L Acharya panikkar
- Advertisement -

ಚೆನ್ನೈ: ಖ್ಯಾತ ತಮಿಳು ಕಿರುತೆರೆ ನಟಿ ವಿ ಜೆ ಚಿತ್ರಾ ಆತ್ಮಹತ್ಯೆ ಪ್ರಕರಣ ಕ್ಕೆ ಸಬಂಧಿಸಿದಂತೆ ಅವರ ಪತಿ ಹೇಮಂತ್ ನನ್ನು ಪೊಲೀಸರು ಬಂಧಿಸಿದ್ದಾರೆ. ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಹೇಮಂತ್ ಅವರನ್ನು ಬಂಧಿಸಲಾಗಿದೆ.

ಹೇಮಂತ್ ಮತ್ತು ಚಿತ್ರಾ ಮದುವೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಆದರೆ ಮನೆಯವರಿಗೆ ಈ ವಿಷಯ ತಿಳಿದಿಲ್ಲ ಎಂದು ಹೇಳಲಾಗುತ್ತಿದೆ. ಇಬ್ಬರ ಎಂಗೇಜ್ ಮೆಂಟ್ ಮಾತ್ರ ನಡೆದಿತ್ತು ಎಂದು ಕುಟುಂಬ ಸದಸ್ಯರು ತಿಳಿಸಿದ್ದರು.

28 ವರ್ಷ ಪ್ರಾಯದ ಚಿತ್ರಾ ಅವರು ಡಿಸೆಂಬರ್ 9ರಂದು ಆತ್ಮಹತ್ಯೆಗೆ ಶರಣಾಗಿದ್ದರು. ಪಾಂಡ್ಯನ್ ಸ್ಟೋರ್ಸ್ ಧಾರವಾಹಿ ಮೂಲಕ ಅವರು ಮನೆ ಮಾತಾಗಿದ್ದರು.ಕಳೆದ ಹಲವು ತಿಂಗಳಿನಿಂದ ತಮ್ಮ ಪತಿ ಹೇಮಂತ್ ಜತೆ ಅವರು ಪಂಚತಾರಾ ಹೋಟೆಲ್ ನಲ್ಲಿ ವಾಸವಾಗಿದ್ದರು.

ಸ್ನಾನ ಮಾಡಿ ಬರುತ್ತೇನೆ ಎಂದು ಹೇಳಿ ಹೋಗಿದ್ದ ಚಿತ್ರಾ ಹೊರಗೆ ಬರಲೇ ಇಲ್ಲ. ಬಳಿಕ ಹೋಟೆಲ್ ಸಿಬ್ಬಂದಿ ನೆರವು ಪಡೆದು ಬಾಗಿಲು ತೆರೆಯಲಾಯಿತು. ಈ ಸಂದರ್ಭದಲ್ಲಿ ಚಿತ್ರಾ ಆತ್ಮಹತ್ಯೆ ಮಾಡಿರುವುದು ಕಂಡು ಬಂತು ಎಂದು ಹೇಮಂತ್ ಪೊಲೀಸರಿಗೆ ಮಾಹಿತಿ ನೀಡಿದ್ದ. ಮರಣೋತ್ತರ ಪರೀಕ್ಷಾ ವರದಿಯಲ್ಲಿ ಚಿತ್ರಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ದೃಢಪಟ್ಟಿದೆ.

- Advertisement -

Related news

error: Content is protected !!