Friday, April 26, 2024
spot_imgspot_img
spot_imgspot_img

ಮುಂಬೈ: ಭೂಗತ ಪಾತಕಿ ಛೋಟಾ ರಾಜನ್ ಸೇರಿ ನಾಲ್ವರಿಗೆ ಎರಡು ವರ್ಷ ಜೈಲು ಶಿಕ್ಷೆ!

- Advertisement -G L Acharya panikkar
- Advertisement -

ಮುಂಬೈ: ಭೂಗತ ಪಾತಕಿ ಛೋಟಾ ರಾಜನ್ ಮತ್ತು ಇತರ ಮೂವರಿಗೆ ಮುಂಬೈ ಸೆಷನ್ಸ್ ನ್ಯಾಯಾಲಯ ಸೋಮವಾರ ಶಿಕ್ಷೆ ವಿಧಿಸಿದೆ.ನಾಲ್ವರಿಗೂ ಎರಡು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

ನಂದು ವಾಜೇಕರ್ ಎಂಬ ಪನ್ವೇಲ್ ಬಿಲ್ಡರ್ ಗೆ ರಾಜನ್ ಬೆದರಿಕೆ ಒಡ್ಡಿದ್ದ ಪಕರಣ ಹಾಗೂ ರಾಜನ್ ವಾಜೇಕರ್ ನಿಂದ 26 ಕೋಟಿ ರೂಪಾಯಿ ಗಳನ್ನು ಸುಲಿಗೆ ಮಾಡಲು ಯತ್ನಿಸಿದ್ದಎಂದು ಆರೋಪಿಸಲಾಗಿದ್ದ ಪ್ರಕರಣದಲ್ಲಿ ನ್ಯಾಯಾಲಯ ಶಿಕ್ಷೆ ವಿಧಿಸಿದೆ.

ಬಿಲ್ಡರ್ ನಂದು ವಾಜೇಕರ್ ಗೆ ಬೆದರಿಕೆ ಹಾಕಿದ ಆರೋಪ ಛೋಟಾ ರಾಜನ್ ಮೇಲೆ ಇದ್ದು, ಅವರಿಂದ 26 ಕೋಟಿ ರೂಪಾಯಿ ಗಳನ್ನು ದೋಚಲು ಯತ್ನಿಸಿದ್ದಾನೆ ಎನ್ನಲಾಗಿದೆ. ಪ್ರಕರಣದ ವಿವರಗಳ ಪ್ರಕಾರ, ನಂದು ವಾಜೇಕರ್ ಎಂಬ ಬಿಲ್ಡರ್ 2015ರಲ್ಲಿ ಪುಣೆಯಲ್ಲಿ ಜಮೀನು ಖರೀದಿಸಿದ್ದು, 2 ಕೋಟಿ ರೂ ಕಮಿಷನ್ ಅನ್ನು ಪರಮಾನಂದ್ ಠಕ್ಕರ್ ಎಂಬ ಏಜೆಂಟ್ ಗೆ ನೀಡಲು ನಿರ್ಧರಿಸಲಾಗಿತ್ತು.

ಥಾಕರ್ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟರು, ವಾಜೇಕರ್ ಅದನ್ನು ಒಪ್ಪಲಿಲ್ಲ. ನಂತರ ಥಾಕರ್ ಛೋಟಾ ರಾಜನ್ ನನ್ನು ಸಂಪರ್ಕಿಸಿ, ತನ್ನ ಕೆಲವರನ್ನು ವಾಜೇಕರ್ ಕಚೇರಿಗೆ ಕಳುಹಿಸಿ 26 ಕೋಟಿ ರೂಪಾಯಿಗಳಿಗೆ ಬೇಡಿಕೆ ಯಿಟ್ಟಿದ್ದ ಮತ್ತು ವಜೇಕರ್ ನನ್ನು ಕೊಲ್ಲುವುದಾಗಿ ಬೆದರಿಕೆ ಯನ್ನೂ ಒಡ್ಡಿದ್ದಎನ್ನಲಾಗಿದೆ. ಈ ಪ್ರಕರಣದ ನಾಲ್ವರು ಆರೋಪಿಗಳಾದ ಸುರೇಶ್ ಶಿಂಧೆ, ಲಕ್ಷ್ಮಣ ನಿಕಮ್ ಅಲಿಯಾಸ್ ದಡಾಯ, ಸುಮಿತ್ ವಿಜಯ್ ಮಾತ್ರೆ ಮತ್ತು ಛೋಟಾ ರಾಜನ್ ಆರೋಪಿಗಳಾಗಿದ್ದರು.

- Advertisement -

Related news

error: Content is protected !!