Monday, May 20, 2024
spot_imgspot_img
spot_imgspot_img

ಭಾರತದ 48ನೇ ಸಿಜೆಐ ಆಗಿ ಪ್ರಮಾಣವಚನ ಸ್ವೀಕರಿಸಿದ ನ್ಯಾ.ಎನ್. ವಿ ರಮಣ

- Advertisement -G L Acharya panikkar
- Advertisement -

ನವದೆಹಲಿ: ಸುಪ್ರೀಂಕೋರ್ಟ್​ನ ನೂತನ ಮುಖ್ಯನ್ಯಾಯಮೂರ್ತಿಯಾಗಿ ಜಸ್ಟಿಸ್​ ಎನ್​​.ವಿ ರಮಣ ರವರು ಅಧಿಕಾರ ವಹಿಸಿಕೊಂಡಿದ್ದಾರೆ. ಭಾರತದ 48ನೇ ಸಿಜಿಐ ಆಗಿ ರಮಣ ರವರು ಪ್ರಮಾಣವಚನ ಸ್ವೀಕರಿಸಿದರು. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರಮಾಣ ವಚನ ಭೋದಿಸಿದರು.

ಈ ವೇಳೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಪ್ರಧಾನಮಂತ್ರಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮುಂತಾದ ಗಣ್ಯರು ಉಪಸ್ಥಿತರಿದ್ದರು. ಎಲ್ಲರೂ ಮಾಸ್ಕ್​​ ಧರಿಸಿ, ಸಾಮಾಜಿಕ ಅಂತರ ಪಾಲಿಸಿ ಪ್ರಮಾಣವಚನದಲ್ಲಿ ಭಾಗಿಯಾದರು.

ಹಿಂದಿನ ಸಿಜೆಐ ಎಸ್.ಎ ಬೋಬ್ಡೆಯವರು ನಿನ್ನೆ ನಿವೃತ್ತಿ ಹೊಂದಿದದರು. ಸುಪ್ರೀಂಕೋರ್ಟ್ ಬಾರ್ ಅಸೋಸಿಯೇಷನ್ ವರ್ಚುವಲ್ ಕಾರ್ಯಕ್ರಮದ ಮೂಲಕ ಅವರನ್ನು ಬೀಳ್ಕೊಟ್ಟಿತು.

ಪ್ರಸ್ತುತ ಬೋಬ್ಡೆ ಯವರ ನಂತರ ಸುಪ್ರೀಂಕೋರ್ಟ್​ನಲ್ಲಿ ಅತ್ಯಂತ ಹಿರಿಯ ಜಡ್ಜ್ ಆಗಿರೋರು ನ್ಯಾ.​​ ಎನ್​​.ವಿ ರಮಣ. ಹೀಗಾಗಿ ಬೋಬ್ಡೆ ಅವರು ತಮ್ಮ ಉತ್ತರಾಧಿಕಾರಿಯಾಗಿ ರಮಣ ಅವರ ಹೆಸರನ್ನ ಶಿಫಾರಸ್ಸು ಮಾಡಿದ್ದರು. ರಮಣ ಅವರಿಗೆ 2022 ಆಗಸ್ಟ್​​ 6ರವರೆಗೆ ಅಂದ್ರೆ ಒಂದು ವರ್ಷ 4 ತಿಂಗಳ ಕಾಲ ಸಿಜೆಐ ಆಗಿ ಸೇವೆ ಸಲ್ಲಿಸಲು ಅವಧಿ ಇರಲಿದೆ.

ಆಂಧ್ರಪ್ರದೇಶದ ಕೃಷಿ ಹಿನ್ನೆಲೆಯ ಕುಟುಂಬದವರಾದ ನುಥಲಪತಿ ವೆಂಕಟ ರಮಣ ಅವರು 1957ರ ಆಗಸ್ಟ್ 27ರಂದು ಜನಿಸಿದರು. 2000 ಇಸವಿಯಲ್ಲಿ ಆಂಧ್ರಪ್ರದೇಶ ಹೈಕೋರ್ಟ್​ನ ಖಾಯಂ ನ್ಯಾಯಮೂರ್ತಿಯಾಗಿ ನೇಮಕಗೊಂಡರು. ಬಳಿಕ ದೆಹಲಿ ಹೈಕೋರ್ಟ್​ನ ಮುಖ್ಯನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದರು. 2014ರಲ್ಲಿ ಸುಪ್ರೀಂಕೋರ್ಟ್​ ಜಡ್ಜ್​​ ಆಗಿ ನೇಮಕಗೊಂಡಿದ್ದರು. ಆಂಧ್ರಪ್ರದೇಶ ನ್ಯಾಯಾಂಗ ಅಕಾಡೆಮಿಯ ಅಧ್ಯಕ್ಷರಾಗಿಯೂ ರಮಣ ಅವರು ಸೇವೆ ಸಲ್ಲಿಸಿದ್ದಾರೆ.

driving
- Advertisement -

Related news

error: Content is protected !!