Friday, April 19, 2024
spot_imgspot_img
spot_imgspot_img

ಜಮ್ಮುಕಾಶ್ಮೀರ: ಡ್ರೋನ್‌ನಲ್ಲಿ ಭಯೋತ್ಪಾದಕ ಚಟುವಟಿಕೆ; ಡ್ರೋನ್ ಹೊಡೆದುರುಳಿಸಿದ ಪೊಲೀಸರು

- Advertisement -G L Acharya panikkar
- Advertisement -

ಜಮ್ಮುಕಾಶ್ಮೀರ: ಸಂಶಯಾತ್ಮಕವಾಗಿ ಹಾರಾಟ ನಡೆಸುತ್ತಿದ್ದ ಡ್ರೋನ್ ಒಂದನ್ನು ಪೊಲೀಸರು ಹೊಡೆದುರುಳಿಸಿದ ಘಟನೆ ಜಮ್ಮು ಜಿಲ್ಲೆಯ ಅಕ್ನೂರ್ ಪ್ರದೇಶದಲ್ಲಿ ನಡೆದಿದೆ.

ಈ ಡ್ರೋನ್‌ನಲ್ಲಿ 5 ಕೆಜಿ ಸುಧಾರಿತ ಎಲ್‌ಇಡಿ ಸ್ಪೋಟಕಗಳಿದ್ದವು ಎಂದು ಜಮ್ಮು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ. ಡ್ರೋನ್ ಚಟುವಟಿಕೆಯ ಹಿಂದೆ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾದ (ಎಲ್‌ಇಟಿ) ಕೈವಾಡ ಇದೆಯೇ ಮತ್ತು ಭಯೋತ್ಪಾದಕ ದಾಳಿಗೆ ಸಂಚನ್ನು ರೂಪಿಸುತ್ತಿದೆಯೇ ಎಂದು ತನಿಖೆ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ.

ಈ ಹಿಂದೆಯೂ ಹಲವು ಬಾರಿ ಜಮ್ಮು ಕಾಶ್ಮೀರ ಗಡಿಯಲ್ಲಿ ಡ್ರೋನ್‌ಗಳು ಪತ್ತೆಯಾಗಿದ್ದವು. ಈ ಹಿನ್ನೆಲೆಯಲ್ಲಿ ಜಮ್ಮು ಕಾಶ್ಮೀರದ ಡಿಜಿಪಿ ಭಯೋತ್ಪಾದಕ ಸಂಘಟನೆಗಳು ನಿರಂತರವಾಗಿ ಡ್ರೋನ್‌ಗಳನ್ನು ಭಯೋತ್ಪಾದಕ ಚಟುವಟಿಕೆಗಳಿಗೆ ಬಳಸಲು ಪ್ರಯತ್ನಿಸುತ್ತಿವೆ. ಅದ್ದರಿಂದ ಹೆಚ್ಚಿನ ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು.

driving
- Advertisement -

Related news

error: Content is protected !!