- Advertisement -
- Advertisement -
*ಸಿಎಂ ಪುತ್ರ ವಿಜಯೇಂದ್ರ ವರದಿ ನೆಗೆಟಿವ್
ವರದಿ: ನ್ಯೂಸ್ ಡೆಸ್ಕ್, ವಿ ಟಿವಿ
ಬೆಂಗಳೂರು: ಸಿಎಂ ಬಿ.ಎಸ್ ಯಡಿಯೂರಪ್ಪ ಅವರಿಗೆ ಕೊರೊನಾ ದೃಢಪಟ್ಟ ಬೆನ್ನಲ್ಲೇ ಅವರ ಪುತ್ರಿ ಪದ್ಮಾವತಿಗೂ ಕೂಡ ಕೊರೊನಾ ಪಾಸಿಟಿವ್ ಬಂದಿದೆ. ಸಿಎಂಗೆ ಕೊರೊನಾ ಪಾಸಿಟಿವ್ ಬಂದ ಬಳಿಕ ಅವರ ಕುಟುಂಬಸ್ಥರು ಪರೀಕ್ಷೆಗೆ ಒಳಗಾಗಿದ್ದರು. ಇದೀಗ ವರದಿ ಬಂದಿದ್ದು, ಅವರ ಮಗಳಿಗೂ ಕೊರೊನಾ ತಗುಲಿರುವುದು ದೃಢವಾಗಿದೆ. ಆದರೆ ಪುತ್ರ ವಿಜಯೇಂದ್ರ ವರದಿ ನೆಗೆಟಿವ್ ಬಂದಿದೆ.
ಸಿಎಂ ಬಿಎಸ್ ವೈ ಅವರ ನಿತ್ಯ ಉಟೋಪಚಾರವನ್ನು ಪುತ್ರಿ ಪದ್ಮಾವತಿ ನೋಡಿಕೊಳ್ಳುತ್ತಿದ್ದರು. ಹೀಗಾಗಿ ಅವರಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನಲೆಯಲ್ಲಿ ಹೋಂ ಕ್ವಾರಂಟೈನ್ ಗೆ ಒಳಗಾಗಿದ್ದಾರೆ. ಇಂದು ಬಿಎಸ್ ವೈ ಅವರ ಮೊಮ್ಮಕ್ಕಳು ಕೂಡ ಪರೀಕ್ಷೆಗೆ ಒಳಗಾಗಲಿದ್ದಾರೆ ಎಂದು ತಿಳಿದುಬಂದಿದೆ.
- Advertisement -