Monday, June 22, 2026
spot_imgspot_img
spot_imgspot_img

ಪುತ್ತೂರು ಚುನಾವಣಾ ರಣಕಣಕ್ಕೆ ಯೋಗಿ ಆದಿತ್ಯನಾಥ್ ಎಂಟ್ರಿ

- Advertisement -
- Advertisement -

ಬಿಸಿಲನ್ನು ಲೆಕ್ಕಿಸದೆ ಕಾರ್ಯಕರ್ತರ ಜೋಶ್-ಜನಸಾಗರ

ಪುತ್ತೂರು: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭೇಟಿ ಹಿನ್ನಲೆ ಪುತ್ತೂರು ವಿಧಾನ ಸಭಾ ಕ್ಷೇತ್ರ ರಂಗೇರಿದ್ದು , ನಗರದ ಹೊರವಲಯದಲ್ಲಿರುವ ಮೊಟ್ಟೆತ್ತಡ್ಕ ಹೆಲಿಪ್ಯಾಡ್‌ ನಿಂದ ವಾಹನದ ಮೂಲಕ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಯೋಗಿ ಆದಿತ್ಯನಾಥ್‌ ಆಗಮಿಸಿ ಶ್ರೀ ಮಹಾಲಿಂಗೇಶ್ವರ ದೇವರ ದರ್ಶನ ಪಡೆದಿದ್ದಾರೆ. ಅಲ್ಲಿಂದ ಕಾರಿನ ಮೂಲಕ ಆಗಮಿಸಿದರು.

ಪುತ್ತೂರು ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಪರ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಚಾರ ನಡೆಸಲಿದ್ದಾರೆ. ಯೋಗಿ ಆದಿತ್ಯನಾಥ್ ಭೇಟಿ ಹಿನ್ನಲೆಯಲ್ಲಿ ಪುತ್ತೂರು ನಗರದಾದ್ಯಂತ ಪೊಲೀಸ್ ಸರ್ಪಗಾವಲು ಇದ್ದು, ರಾಜ್ಯ ಪೊಲೀಸ್ ಮತ್ತು ಕೇಂದ್ರ ಮೀಸಲು ಪಡೆಯಿಂದ ಬಂದೋಬಸ್ತ್ ಮಾಡಲಾಗಿದೆ. ದೇವಳದ ಬಳಿ ಮತ್ತು ರಸ್ತೆ ಇಕ್ಕೆಲಗಳಲ್ಲಿ ಜನಸಾಗರ ಯೋಗಿಯತ್ತ ಕೈ ಬೀಸಿ ಸಂಭ್ರಮಿಸಿದ್ದಾರೆ.

ನಗರದ ಮುಖ್ಯ ರಸ್ತೆಯಲ್ಲಿ ಯೋಗಿ ರೋಡ್‌ ಶೋ ನಡೆಯಲಿದ್ದು, ಪ್ರಧಾನ ಅಂಚೆ ಕಛೇರಿಯಿಂದ ಮಾರುಕಟ್ಟೆ ರಸ್ತೆಯಲ್ಲಿ ರೋಡ್‌ ಶೋ ನಡೆಯಲಿದೆ. ರೋಡ್‌ ಶೋ ಬಳಿಕ ಕಿಲ್ಲೆ ಮೈದಾನದಲ್ಲಿ ಕಾರ್ಯಕರ್ತರನ್ನು ಉದ್ಧೇಶಿಸಿ ಯೋಗಿ ಮಾತನಾಡಲಿದ್ದಾರೆ.

- Advertisement -

Related news

error: Content is protected !!