ವರದಿ: ನ್ಯೂಸ್ ಡೆಸ್ಕ್, ವಿ ಟಿವಿ
ಬೆಂಗಳೂರು: ದೇಶದ ಅತಿ ದೊಡ್ಡ ಕೋರೊನಾ ಕೇರ್ ಸೆಂಟರ್ ಗೆ ಸಿಎಂ ಬಿ.ಎಸ್ .ಯಡಿಯೂರಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಮುಂದಿನ ವಾರದಲ್ಲಿ ಇಲ್ಲಿಗೆ ಸೋಂಕಿತರನ್ನು ಶಿಫ್ಟ್ ಮಾಡಲಾಗುವುದು. ವೈದ್ಯರು, ನರ್ಸ್, ಸಹಾಯಕ ಸಿಬ್ಬಂದಿ ಸೇರಿದಂತೆ ಸುಮಾರು 2,200 ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಅಧಿಕಾರಿಗಳ ಸತತ ಪರಿಶ್ರಮದಿಂದ ಈ ಅತಿ ದೊಡ್ಡ ಕೋವಿಡ್ ಸೆಂಟರ್ ಮಾಡಲು ಸಾಧ್ಯವಾಗಿದೆ. ಬೇರೆಡೆ ಆಸ್ಪತ್ರೆಗಳಲ್ಲಿ ಬೆಡ್ ಫುಲ್ ಆದ ಬಳಿಕ ಇನ್ನುಳಿದ ಸೋಂಕಿತರನ್ನು ಇಲ್ಲಿಗೆ ಶಿಫ್ಟ್ ಮಾಡಲಾಗುವುದು ಎಂದು ತಿಳಿಸಿದರು.
ಕೋವಿಡ್ ಕೇರ್ ಸೆಂಟರ್ ನಲ್ಲಿ ಸುಸಜ್ಜಿತ ವ್ಯವಸ್ಥೆ:
ಈ ಕೋವಿಡ್ ಕೇರ್ ಸೆಂಟರ್ ನಲ್ಲಿ ತುರ್ತು ಚಿಕಿತ್ಸೆ, ಐಸಿಯು ಘಟಕ, ಇಸಿಜಿ ವ್ಯವಸ್ಥೆ ಇರಲಿದೆ. ಇದಲ್ಲದೇ, ದಿನದ 24 ಗಂಟೆ ಮೇಲ್ವಿಚಾರಕರ ವ್ಯವಸ್ಥೆ, ಹಾಸಿಗೆ ಹಂಚಿಕೆಗೆ ಪಾರದರ್ಶಕ ಕೇಂದ್ರ ಇರಲಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರು ಬಿಟ್ಟು ತೆರಳಂತೆ ಸಿಎಂ ಮನವಿ:
ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಮಿತಿಮೀರುತ್ತಿರುವ ಹಿನ್ನಲೆಯಲ್ಲಿ ಜನರು ಹಳ್ಳಿಗೆ ತೆರಳುತ್ತಿದ್ದಾರೆ. ಆದರೆ ಹಳ್ಳಿಗೆ ಕೊರೊನಾ ತೆಗೆದುಕೊಂಡು ಹೋಗಬೇಡಿ ಎಮದು ಮನವಿ ಮಾಡಿದ್ದಾರೆ. ಇದಲ್ಲದೇ, ಆ್ಯಂಬುಲೆನ್ಸ್ ಸೇವೆ ಸಿಗುವುದು ವಿಳಂಬವಾದರೆ ಗಮನಕ್ಕೆ ಕೂಡ ತಿಳಿಸಿದ್ದಾರೆ.