Wednesday, June 17, 2026
spot_imgspot_img
spot_imgspot_img

ಉಡುಪಿ: ಅಲೆಗಳ ಹೊಡೆತಕ್ಕೆ ದೋಣಿ ಮುಳುಗಡೆ; ಓರ್ವ ಸಾವು

- Advertisement -
- Advertisement -

ಉಡುಪಿ: ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಉಪ್ಪುಂದದಲ್ಲಿ ಇಂದು ದೋಣಿ ಮುಳುಗಡೆಯಾದ ಘಟನೆ ನಡೆದಿದ್ದು, ಸಂದರ್ಭದಲ್ಲಿ ಓರ್ವ ಮೀನುಗಾರ ಸಮುದ್ರದಲ್ಲಿ ಜಲಸಮಾಧಿಯಾಗಿದ್ದಾರೆ ಎಂದು ತಿಳಿದುಬಂದಿದೆ.  ಅಲೆಗಳ ಹೊಡೆತಕ್ಕೆ ಸಿಲುಕಿ ಒಟ್ಟು ಎಂಟು ಮಂದಿಯಿದ್ದ ದೋಣಿ ಮಗುಚಿ ಬಿದ್ದಿದೆ.

ದುರಂತಕ್ಕೀಡಾದ ದೋಣಿಯು ಮಾಸ್ತಿ ಮರ್ಲ ಚಿಕ್ಕು ಎಂಬ ಹೆಸರನ್ನು ಹೊಂದಿದ್ದು ಸಚಿನ್ ಮೊಗವೀರ ಎಂಬವರಿಗೆ ಸೇರಿದ್ದು ,ನಾಡ ದೋಣಿಯಲ್ಲಿ ಒಟ್ಟು 8 ಮಂದಿ ಮೀನುಗಾರರು ಇದ್ದರು .ಇದರಲ್ಲಿ ಆರು ಮಂದಿ ಮೀನುಗಾರರು ಅಪಾಯದಿಂದ ಪಾರಾಗಿದ್ದರೆ ಇಬ್ಬರು ಮೀನುಗಾರರು ಸಮುದ್ರ ಪಾಲಾಗಿದ್ದರು ಎಂದು ತಿಳಿದುಬಂದಿದೆ.

ಸಮುದ್ರ ಪಾಲಾದ ಇಬ್ಬರು ಮೀನುಗಾರರ ಪೈಕಿ ಓರ್ವ ಮೀನುಗಾರ ಗಂಭೀರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ .ಮತ್ತೊಬ್ಬ ಮೀನುಗಾರ ಅಲೆಗಳ ಹೊಡೆತಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!