Monday, May 20, 2024
spot_imgspot_img
spot_imgspot_img

ದ್ವಿಚಕ್ರ ವಾಹನ -ಬುಲೇರೋ ವಾಹನ ನಡುವೆ ಡಿಕ್ಕಿ; ಬೈಕ್‌ ಸವಾರರಿಬ್ಬರೂ ಸಾವು..!

- Advertisement -G L Acharya panikkar
- Advertisement -

ದ್ವಿಚಕ್ರ ವಾಹನ ಹಾಗೂ ಬುಲೇರೋ ವಾಹನದ ನಡುವೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರರಿಬ್ಬರೂ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ರಾಯಚೂರು ಮುದ್ಗಲ್‌ ಪಟ್ಟಣದ ಹೊರವಲಯದಲ್ಲಿ ನಡೆದುದೆ.

ಮೃತಪಟ್ಟವರನ್ನು ಶಿವಬಸವ (37) ಹೊನ್ನಮ್ಮ ( 33) ಎಂದು ಗುರುತಿಸಲಾಗಿದೆ.

ಇವರು ಲಿಂಗಸುಗೂರು ತಾಲೂಕಿನ ಹತ್ತಿಚಿನ್ನದಗಣಿ ಸಮೀಪದ ಮಲ್ಲಾಪೂರು ಗ್ರಾಮದವರಾಗಿದ್ದಾರೆ. ತಾವರಗೇರಾದಲ್ಲಿ ಮದುವೆಗೆಂದು ಹೋದವರು ಅಲ್ಲಿಂದ ವಾಪಸ್‌ ಬರುತ್ತಿದ್ದರು. ಆ ವೇಳೆ ಅಪಘಾತ ಸಂಭವಿಸಿದೆ.

ತಾವರಗೇರಾದಿಂದ ಮಲ್ಲಾಪೂರಿನತ್ತ ಬೈಕ್‌ನಲ್ಲಿ ಪಾಸಾಗುವಾಗ ಇನ್ನೊಂದು ಕಡೆಯಿಂದ ಬರುತ್ತಿದ್ದ ಬುಲೇರೋ ವಾಹನ ಡಿಕ್ಕಿಯಾಗಿದೆ. ಈ ವೇಳೆ ಶಿವಬಸವ ಹಾಗೂ ಹೊನ್ನಮ್ಮ ಕೆಳಗೆ ಬಿದ್ದಿದ್ದಾರೆ. ಶಿವಬಸವ ಅವರ ತಲೆ ಮೇಲೆ ವಾಹನ ಹರಿದಿದ್ದರಿಂದ ಅವರ ತಲೆ ಛಿದ್ರವಾಗಿದೆ. ಇನ್ನು ಹೊನ್ನಮ್ಮ ಸಹ ಗಂಭೀರವಾಗಿ ಗಾಯಗೊಂಡಿದ್ದರಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಮುದಗಲ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುದ್ಗಲ್ ಪೊಲೀಸ್‌ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ.

- Advertisement -

Related news

error: Content is protected !!