Monday, July 20, 2026
spot_imgspot_img
spot_imgspot_img

ನಾಮಿನೇಷನ್ ಬಲೆಯಲ್ಲಿ ಈ ವಾರ ಸಿಕ್ಕಿಕೊಂಡ ‘ಬಿಗ್ ಹೌಸ್ ನ 9 ಸ್ಪರ್ಧಿಗಳು’ ಯಾರು ಯಾರು ಗೊತ್ತಾ?

- Advertisement -
- Advertisement -

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಬಿಗ್ ಬಾಸ್ ಸೀಸನ್-8ರ ಈ ವಾರದ ನಾಮಿನೇಷನ್ ಪ್ರಕ್ರಿಯೆ ಮುಕ್ತಾಯವಾಗಿದ್ದು, ಒಂಟಿ ಮನೆಯ ಒಂಬತ್ತು ಕಂಟೆಸ್ಟೆಂಟ್ ನಾಮಿನೇಟ್ ಆಗಿದ್ದಾರೆ. ಶಮಂತ್ ಗೌಡ, ನಿಧಿ ಸುಬ್ಬಯ್ಯ, ಗೀತಾ ಭಾರತಿ ಭಟ್, ರಘು ಗೌಡ, ಅರವಿಂದ್, ವಿಶ್ವನಾಥ್, ದಿವ್ಯ ಉರುಡುಗ, ದಿವ್ಯಾ ಸುರೇಶ್ ಹಾಗೂ ಪ್ರಶಾಂತ್ ಸಂಬರ್ಗಿ ಸೇರಿ ಬಂಬತ್ತು ಮಂದಿ ನಾಮಿನೇಟ್ ಆಗಿದ್ದಾರೆ. ಇದರಲ್ಲಿ ಹಿರಿಯ ನಟ ಶಂಕರ್ ಅಶ್ವತ್ಥ್ ಕೂಡ ನಾಮಿನೇಟ್ ಲಿಸ್ಟ್ ನಲ್ಲಿದ್ದರು. ಆಗ ಕ್ಯಾಪ್ಟನ್ ರಾಜೀವ್ ಬಿಗ್ ಬಾಸ್ ನೀಡಿದ ವಿಶೇಷ ಅಧಿಕಾರ ಬಳಸಿಕೊಂಡು ಅವರನ್ನು‌ ಉಳಿಸಿದರು.

ಮನೆಯ ಎಲ್ಲಾ ಸದಸ್ಯರು ನಾಮಿನೇಟ್ ಪ್ರಕ್ರಿಯೆಗೆ ನಿಧಿ ಹಾಗೂ ಶಮಂತ್ ಹೆಸರನ್ನೇ ಹೆಚ್ಚಾಗಿ ಸೂಚಿಸಿದರು. ಶಮಂತ್ ಕ್ಯಾಪ್ಟನ್ಸಿ ಸರಿಯಾಗಿ ನಿಭಾಯಿಸಿ ಕಳಪೆ ಆಟ ಪ್ರದರ್ಶನ ಮಾಡಿದ್ದಾರೆ. ನಿಧಿ, ಟಾಸ್ಕ್ ನ್ನು ಗಂಭೀರವಾಗಿ ಪರಿಗಣಿಸಿಯೇ ಎಲ್ಲಾ ಎಂದು ಮನೆಯವರು ಆರೋಪಿಸಿದ್ದರು.

ಜೋಡಿಯಾಗಿ ಈ ವಾರದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಭಾಗಿಯಾದ ಕಂಟೆಸ್ಟೆಂಟ್ ಗಳಲ್ಲಿ ಯಾವ ಜೋಡಿ ಯಾರನ್ನ ನಾಮಿನೇಟ್ ಮಾಡಿದ್ದಾರೆ ಎಂಬ ಪಟ್ಟಿ‌ ಇಲ್ಲಿದೆ.

1. ಪ್ರಶಾಂತ್ ಸಂಬರ್ಗಿ- ಶುಭಾ ಪೂಂಜಾ: ಶಮಂತ್-ನಿಧಿ

2. ದಿವ್ಯಾ-ವಿಶ್ವನಾಥ್: ಶಮಂತ್-ನಿಧಿ
3. ರಘು-ವೈಷ್ಣವಿ: ಗೀತಾ- ಶಮಂತ್
5. ಚಂದ್ರಕಲಾ- ಶಂಕರ್: ನಿಧಿ- ರಘು
6. ಮಂಜು- ಗೀತಾ: ಶಮಂತ್- ಅರವಿಂದ್
7. ನಿಧಿ- ಶಮಂತ್: ದಿವ್ಯಾ ಉರುಡುಗ- ವಿಶ್ವನಾಥ್
8. ದಿವ್ಯಾ ಉರುಡುಗ-ಅರವಿಂದ್: ಶಂಕರ್- ದಿವ್ಯಾ ಸುರೇಶ್

- Advertisement -

Related news

error: Content is protected !!