Monday, June 15, 2026
spot_imgspot_img
spot_imgspot_img

ಸುಳ್ಯ: ಶಂಕಿತ ನಕ್ಸಲರ ತಂಡ ಭೇಟಿ; ನಕ್ಸಲ್ ನಿಗ್ರಹ ದಳದಿಂದ ಕೂಂಬಿಂಗ್ ಆರಂಭ

- Advertisement -
- Advertisement -

ಸುಳ್ಯ: ಕೂಜುಮಲೆ ಕಡಮಕಲ್ಲು ಪ್ರದೇಶದಲ್ಲಿ ನಕ್ಸಲರು ಪ್ರತ್ಯಕ್ಷರಾಗಿದ್ದಾರೆಂಬ ಮಾಹಿತಿಯ ಆಧಾರದಲ್ಲಿ ಇದೀಗ ಸ್ಥಳಕ್ಕೆ ನಕ್ಸಲ್ ನಿಗ್ರಹ ದಳ ಆಗಮಿಸಿದ್ದು, ಮೂರು ಕಡೆಗಳಲ್ಲಿ ಕೂಂಬಿಂಗ್ ಆರಂಭಿಸಿರುವುದಾಗಿ ತಿಳಿದು ಬಂದಿದೆ.

ಕಾರ್ಕಳದಿಂದ ಬಂದ ನಕ್ಸಲ್ ನಿಗ್ರಹ ಪಡೆಯು ವಿವಿಧ ತಂಡಗಳಾಗಿ ಈ ಭಾಗದ ಬೇರೆ ಬೇರೆ ಪ್ರದೇಶಗಳಲ್ಲಿ ಕೂಂಬಿಂಗ್ ನಡೆಸಲು ಸಿದ್ಧವಾಗಿದೆ.

ನಕ್ಸಲರ ಪೈಕಿ ಇಬ್ಬರ ಗುರುತನ್ನು ಸ್ಥಳೀಯರು ಗುರುತಿಸಿದ್ದು ವಿಕ್ರಮ್ ಗೌಡ ಹಾಗೂ ಕಿರಣ್ ತಂಡಲ್ಲಿದ್ದರು ಎಂಬ ಮಾಹಿತಿ ಪೋಲೀಸರಿಗೆ ಲಭ್ಯವಾಗಿದೆ ಎನ್ನಲಾಗಿದೆ.ಅರಣ್ಯ ಇಲಾಖೆಯ ಸಿಬ್ಬಂದಿಗಳು ಎಂದು ಹೇಳಿಕೊಂಡು ಕಡಮಕಲ್ ಎಸ್ಟೇಟ್ ಬಳಿಯ ಅಂಗಡಿಗೆ ಬಂದು ದಿನಸಿ ಕೊಂಡೊಯ್ದಿದ್ದಾರೆಂದು ತಿಳಿದು ಬಂದಿದೆ.

- Advertisement -

Related news

error: Content is protected !!