Tuesday, July 21, 2026
spot_imgspot_img
spot_imgspot_img

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ದರ 42 ರೂ. ಏರಿಕೆ!

- Advertisement -
- Advertisement -

ನವದೆಹಲಿ: ಈಗಾಗಲೇ ಪೆಟ್ರೋಲ್‌, ಡೀಸೆಲ್‌, ಸಿಎನ್‌ಜಿ ದರ ಏರಿಕೆಯಿಂದ ತತ್ತರಿಸಿರುವ ದೇಶದ ಜನರಿಗೆ ಕೇಂದ್ರ ಸರ್ಕಾರ ಬೆಳ್ಳಂಬೆಳಗ್ಗೆ ಶಾಕ್‌ ಕೊಟ್ಟಿದ್ದು, ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ದರ ಭಾರೀ ಏರಿಕೆ ಮಾಡಿದೆ. ಪರಿಷ್ಕೃತ ದರ ಇಂದಿನಿಂದಲೇ ಜಾರಿಯಾಗಲಿದೆ.

ದೆಹಲಿಯಲ್ಲಿ 19 ಕೆಜಿಯ ವಾಣಿಜ್ಯ ಬಳಕೆ ಸಿಲಿಂಡರ್‌ ದರ 42 ರೂ. ಹೆಚ್ಚಾಗಿದ್ದು, ಪ್ರತಿ ಸಿಲಿಂಡರ್‌ ಬೆಲೆ 3,113.5 ರೂ.ಗಳಿಗೆ ತಲುಪಿದ್ದರೆ, ಬೆಂಗಳೂರಿನಲ್ಲಿ 46 ರೂ.ಗಳಷ್ಟು ಹೆಚ್ಚಳವಾಗಿ ಪ್ರತಿ ಸಿಲಿಂಡರ್ ದರ 3,198 ರೂ.ಗಳಿಗೆ ಏರಿಕೆಯಾಗಿದೆ.

ಕೋಲ್ಕತ್ತಾದಲ್ಲಿ 19 ಕೆಜಿ ಸಿಲಿಂಡರ್‌ ದರ 53.5 ರೂ. ಹೆಚ್ಚಾಗಿದ್ದು, 3,255.5 ರೂ. ತಲುಪಿದೆ. ಇದರೊಂದಿಗೆ 5 ಕೆಜಿ ಫ್ರೀ ಟ್ರೇಡ್ ಎಲ್‌ಪಿಜಿ ಸಿಲಿಂಡರ್‌ಗಳ ಮೇಲಿನ ಬೆಲೆ 11 ರೂ. ಹೆಚ್ಚಿಸಿದ್ದು, ಪ್ರತಿ ಸಿಲಿಂಡರ್‌ ಬೆಲೆ 821.5 ರೂ.ಗಳಿಗೆ ತಲುಪಿದೆ.

ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿರುವುದಾಗಿ ತಿಳಿದುಬಂದಿದೆ.

- Advertisement -

Related news

error: Content is protected !!