Thursday, August 13, 2026
spot_imgspot_img
spot_imgspot_img

ಮುಡಿಪು: ಕಾರಿನಡಿಗೆ ಬಿದ್ದು ಪವಾಡ ಸದೃಶವಾಗಿ ಪಾರಾದ ಬಾಲಕ!

- Advertisement -
- Advertisement -
driving

ಮುಡಿಪು: ಬಾಲಕನೋರ್ವ ಕಾರಿನಡಿಗೆ ಬಿದ್ದು ಪವಾಡ ಸದೃಶ ರೀತಿಯಲ್ಲಿ ಪಾರಾದ ಘಟನೆ ಮುಡಿಪು ಸಮೀಪದ ಇರಾ ಬಳಿ ನಡೆದಿದೆ. ಘಟನೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಗಾಯಾಳು ಬಾಲಕ ಮೈಸೂರು ಮೂಲದ ಇಂಜಿನಿಯರ್ ಆಗಿರುವ ಶಿವಾನಂದ್ ಎಂಬವರ ಪುತ್ರ ಮನೋಜ್ (12) ಎನ್ನಲಾಗಿದೆ.

ಆಟವಾಡಲೆಂದು ಮನೆಯಿಂದ ಹೊರ ಓಡಿಬಂದ ಬಾಲಕ ರಸ್ತೆ ದಾಟುವಾಗ ವೇಗವಾಗಿ ಬರುತ್ತಿದ್ದ ಕಾರು ಆತನ ಮೇಲೆ ಹರಿದು ಹೋಗಿದೆ. ಬಾಲಕನ ಎಡಕಾಲು ಮುರಿತಕ್ಕೊಳಗಾಗಿದೆ. ಪ್ರಾಣಾಪಾಯದಿಂದ ಪವಾಡಸದೃಶವಾಗಿ ಪಾರಾಗಿದ್ದಾನೆ.

- Advertisement -

Related news

error: Content is protected !!