- Advertisement -
- Advertisement -
ಬೆಂಗಳೂರು: ಕಮಿಷನರ್ ಕಚೇರಿಯ 12 ಮಂದಿ ಪೊಲೀಸ್ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. ಹೀಗಾಗಿ ಕಮಿಷನರ್ ಕಚೇರಿಯನ್ನು ಮತ್ತೊಮ್ಮೆ ಸೀಲ್ ಡೌನ್ ಮಾಡುವ ಸಾಧ್ಯತೆಯಿದೆ. ಸಿಸಿಆರ್ ಬಿ ವಿಭಾಗದಲ್ಲಿ 8 ಮಂದಿ ಸಿಬ್ಬಂದಿಗೆ ಹಾಗೂ ಅಡ್ಮಿನ್ ವಿಭಾಗದಲ್ಲಿ 4 ಮಂದಿ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿದೆ.
ಇನ್ನು ಕಳೆದ ಒಂದು ವಾರದಿಂದ ಕಮಿಷನರ್ ಕಚೇರಿಯಲ್ಲಿ ರ್ಯಾಂಡಮ್ ಟೆಸ್ಟ್ ಮಾಡಲಾಗುತ್ತಿದೆ. ಈ ವೇಳೆ 12 ಮಂದಿ ಸಿಬ್ಬಂದಿಯ ಕೊರೊನಾ ಪರೀಕ್ಷಾ ವರದಿ ಪಾಸಿಟಿವ್ ಬಂದಿದೆ.
ಇನ್ನುಳಿದಂತೆ ಚೆನ್ನಮ್ಮನ ಕೆರೆ ಪೊಲೀಸ್ ಠಾಣಾಯಲ್ಲಿ ಓರ್ವ ಸಿಬ್ಬಂದಿಗೆ, ನಂದಿನಿ ಲೇಔಟ್ ಠಾಣೆಯಲ್ಲಿ 1, ಮಲ್ಲೇಶ್ವರಂನಲ್ಲಿ 1, ಮಲ್ಲೇಶ್ವರಂನಲ್ಲಿ 2, ರಾಜಗೋಪಾಲ ನಗರ 1 ಹಾಗೂ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ 5 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. ಹೀಗಾಗಿ ಬೆಂಗಳೂರಿನಲ್ಲಿ ಕೊರೊನಾ ಸೋಂಕಿತ ಪೊಲೀಸರ ಸಂಖ್ಯೆ 466ಕ್ಕೆ ಏರಿಕೆಯಾಗಿದೆ.
- Advertisement -