Wednesday, November 6, 2024
spot_imgspot_img
spot_imgspot_img

*ಆಸ್ಪತ್ರೆಯಿಂದ ಪರಾರಿಯಾದ ಸೋಂಕಿತ ಪತ್ತೆ ನಿಟ್ಟುಸಿರುವ ಬಿಟ್ಟ ಜನತೆ   ಸೋಂಕಿತನನ್ನು  ಪತ್ತೆ ಮಾಡಿದ್ದ ಪೊಲೀಸ್ರಿಗೆ  ನಗರ ಆಯುಕ್ತರಿಂದ  ಶಹಭಾಶ್.!*

- Advertisement -
- Advertisement -

ಮಂಗಳೂರು: ನಗರದ ವೆನ್ಲ್ಯಾಕ್ ಕೋವಿಡ್ ಆಸ್ಪತ್ರೆಯಿಂದ ರವಿವಾರ ತಪ್ಪಿಸಿಕೊಂಡಿದ್ದ ಕೋವಿಡ್ 19 ಸೋಂಕಿತನನ್ನು ಇಂದು ಪತ್ತೆ ಮಾಡಲಾಗಿದೆ.ಕೋವಿಡ್ ರೋಗ ಲಕ್ಷಣಗಳಿವೆ ಎಂದು ಹೇಳಿಕೊಂಡು ಪುತ್ತೂರು ಮೂಲದ ಯುವಕನೊಬ್ಬ ಜುಲೈ 1ರಂದು ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ಬಂದಿದ್ದ. ಈತನನ್ನು ದಾಖಲಿಸಿಕೊಂಡ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು. ರವಿವಾರ ಈತನಿಗೆ ಕೋವಿಡ್ ಸೋಂಕು ದೃಢವಾಗಿತ್ತು. ಆದರೆ ರವಿವಾರ ಸಂಜೆ ನಾಲ್ಕು ಗಂಟೆಯ ಸಮಯಕ್ಕೆ ಆಸ್ಪತ್ರೆಯ ವಾರ್ಡ್ ನಿಂದ ತಪ್ಪಿಸಿಕೊಂಡಿದ್ದ.

ಇಂದು ಈತನನ್ನು ಪತ್ತೆ ಮಾಡಲಾಗಿದ್ದು, ಮಂಗಳೂರು ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಈ ಬಗ್ಗೆ ಟ್ವೀಟ್ ಮಾಡಿ ಸ್ಪಷ್ಟಪಡಿಸಿದ್ದಾರೆ.

ನಮ್ಮ ಪೊಲೀಸ್ ಸಿಬ್ಬಂದಿಗಳಾದ ಶಂಕರಪ್ಪ ಲಮಾಣಿ ಮತ್ತು ಶಂಕರಪ್ಪ ನಂಡ್ಯಾಲ್ ಅವರು ತಪ್ಪಿಸಿಕೊಂಡಿದ್ದ ಆರೋಪಿಯನ್ನು ಹಿಡಿದು ವೀರತನ ಮೆರೆದಿದ್ದಾರೆ. ಆದರೆ ಆರೋಪಿಯೂ ಈ ಸಮಯದಲ್ಲಿ ತನಗೆ ತಿಳಿಯದಂತೆ ಅನೇಕರಿಗೆ ಸೋಂಕು ಹರಡಿರಬಹುದು ಎಂದು ಆಯುಕ್ತರು ಟ್ವೀಟ್ ಮಾಡಿದ್ದಾರೆ.

- Advertisement -

Related news

error: Content is protected !!