- Advertisement -
- Advertisement -


ಮೈಸೂರು : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಿರಂತರವಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗುತ್ತಿದೆ ಎಂದು ಬಿಜೆಪಿ ನಗರಾಧಕ್ಷರಾದ ಮಾಜಿ ಶಾಸಕ ಎಲ್. ನಾಗೇಂದ್ರ ಕಿಡಿಕಾರಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏ.1 ರಂದು ಮತ್ತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ರಾಜ್ಯದ ಜನರನ್ನು ಮೂರ್ಖರನ್ನಾಗಿ ಮಾಡಲಾಗಿದೆ. ಹಾಲಿನ ದರ ಮತ್ತಷ್ಟು ದುಬಾರಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಗ್ಯಾರಂಟಿ ಯೋಜನೆ ಜಾರಿ ಮಾಡಿದ ಸರ್ಕಾರ ಮತ್ತೊಂದೆಡೆ ವಿದ್ಯುತ್, ಬಸ್ ಟಿಕೆಟ್ ದರ, ಹಾಲು, ಮೆಟ್ರೋ, ವೈದ್ಯಕೀಯ ವೆಚ್ಚ, ಮರಣ ಪ್ರಮಾಣ ಪತ್ರ, ಆಪರೇಷನ್ ವೆಚ್ಚ, ರೆವೆನ್ಯೂ, ರಿಜಿಸ್ಟ್ರೇಷನ್, ಮುದ್ರಾಂಕ ಶುಲ್ಕ, ಪಾಲಿಕೆ ಟ್ಯಾಕ್ಸ್ ಸೇರಿದಂತೆ ಎಲ್ಲವನ್ನೂ ಹೆಚ್ಚಿಸಿದೆ. ಈ ಮೂಲಕ ಗ್ಯಾರಂಟಿ ಹೆಸರಲ್ಲಿ ಜನರ ದಾರಿ ತಪ್ಪಿಸಿ ಮಂತ್ರಿಗಳು ಮತ್ತು ಶಾಸಕರು ಲೂಟಿ ಹೊಡೆಯುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
- Advertisement -