Friday, May 17, 2024
spot_imgspot_img
spot_imgspot_img

ಸಂಘಟಿತ ಶಕ್ತಿಯ ಭರವಸೆಯ ನಾಯಕ ನಳಿನ್ ಕುಮಾರ್ ಕಟೀಲ್

- Advertisement -G L Acharya panikkar
- Advertisement -

ಪುತ್ತೂರು ತಾಲೂಕು ಪಾಲ್ತಾಡಿ ಗ್ರಾಮದ ಕುಂಜಾಡಿ ಮನೆತನದ ನಳಿನ್‌ ಕುಮಾರ್‌ ಬಾಲ್ಯದಲ್ಲೆ ತನ್ನ ಸಂಘಟನಾ ಚಾತುರ್ಯವನ್ನು ಬೆಳೆಸಿಕೊಂಡರು ನಳಿನ್ ಕುಮಾರ್ ಕಟೀಲ್ ಸಂಘದ ಪ್ರಚಾರಕನಾಗಿದ್ದ ಸಮಯದಿಂದಲೇ ಸಂಘಟನೆಯಲ್ಲಿ ತನ್ನದೇ ಆದ ಕಾರ್ಯಶೈಲಿಯಲ್ಲಿ ಮಿಂಚಿದವರು. 2004ರ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿ 9ರಲ್ಲಿ 7ಸ್ಥಾನ ಬಿಜೆಪಿಗೆ, 2009 ರಲ್ಲಿ ಪಕ್ಷದ ಸಾಮಾನ್ಯ ಕಾರ್ಯಕರ್ತ ನಳಿನ್‌ ಕುಮಾರ್‌ ಲೋಕಸಭಾ ಚುನಾವಣೆಗೆ ಪಕ್ಷದ ಸೂಚನೆ ಮೇರೆಗೆ ಅಭ್ಯರ್ಥಿ. ಲೋಕಸಭೆ ಪ್ರವೇಶಗೈದು ಮೊದಲ ಹಂತದಲ್ಲೇ ಜಿಲ್ಲೆಗೆ 4000 ಕೋಟಿ ಅನುದಾನ ಒದಗಿಸಿದ ಹೆಮ್ಮೆಯ ಕರಾವಳಿ ನಾಯಕ ಕಟೀಲ್‌. ರಾಜ್ಯಾದ್ಯಂತ ಮಿಂಚಿನ ಓಡಾಟ, ಸಂಘಟನೆ ಅನುದಾನ ಬಳಕೆಯಲ್ಲಿ ನಂ.1 ಮಾದರಿ ಸಂಸದ ಎನಿಸಿಕೊಂಡಿದ್ದಾರೆ.

ಪಂಚರತ್ನ, ಬೂತ್‌ಮಟ್ಟದ ಸಮಿತಿಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ ಕೀರ್ತಿ ನಳಿನ್‌ರವರಿಗೆ ಸಲ್ಲುತ್ತದೆ. 58 ಸಾವಿರಕ್ಕೂ ಅಧಿಕ ಮತಗಟ್ಟೆ ಅಧ್ಯಕ್ಷ ನಿವಾಸದಲ್ಲಿ ನಾಮಫಲಕ ಅನಾವರಣಗೊಳಿಸಿದರು, ಪಕ್ಷವನ್ನು ಬಲಪಡಿಸಲು ಕ್ಷೇತ್ರದ ಮುಖಂಡರ ಮನೆಗೆ ಭೇಟಿ ನೀಡಿದರು. ವಿಜಯ ಸಂಕಲ್ಪ ಯಾತ್ರೆಯೊಂದಿಗೆ ಚುನಾವಣಾ ಪ್ರಚಾರ ನಡೆಸಿದರು.

ಪಕ್ಷದಲ್ಲಿ ಹಿರಿಯ-ಕಿರಿಯ ಪದಾಧಿಕಾರಿಗಳನ್ನು ಸಂಘಟನಾತ್ಮಕವಾಗಿ ಒಟ್ಟುಗೂಡಿಸುವಲ್ಲಿ ಯಶಸ್ವಿಯಾಗಿ ಕಾರ್ಯಕರ್ತನಾಗಿ ಹಿರಿಮೆಯ ನಾಯಕರಾಗಿ ಬೆಳೆದರು.ದಕ್ಷಿಣ ಕನ್ನಡ ಜಿಲ್ಲೆಗೆ ಮೂರು ಅವಧಿಗೆ ಸಂಸದರಾಗಿ ಆಯ್ಕೆಯಾಗಿ ಜಿಲ್ಲೆಯ ಅಭಿವೃದ್ದಿಗೆ ಅನುದಾನದ ಹೊಳೆಯನ್ನೇ ಹರಿಸಿದವರು. ದೇಶಾದ್ಯಂತ ಕೋವಿಡ್ ಕರಿನೆರಳಿನ ಸಂಕಷ್ಟ ಸಮಯದಲ್ಲೇ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಧಿಕಾರ ಸ್ವೀಕರಿಸಿದರು. ಇಂತಹ ಕಠಿಣ ಪರಿಸ್ಥಿತಿಯಲ್ಲೂ ಕೋವಿಡ್‌ ಸೇವಾಕಾರ್ಯಕ್ಕೆ ಮುಂದೆ ನಿಂತು, ಅದರ ಜೊತೆಗೆ ಪಕ್ಷ ಸಂಘಟನೆ, ಕಾರ್ಯ ಚಟುವಟಿಕೆಯನ್ನು ಸಮರೋಪಾದಿಯಲ್ಲಿ ನಡೆಸಿದರು. ರಾಜ್ಯ ಬಿಜೆಪಿಯ ರಾಜ್ಯಾದ್ಯಂತ ಮಿಂಚಿನ ಸಂಚಾರ ಮಾಡಿ ಪಕ್ಷವನ್ನು ಮತ್ತಷ್ಟು ಸದೃಢಗೊಳಿಸಿದರು.

- Advertisement -

Related news

error: Content is protected !!