Wednesday, May 15, 2024
spot_imgspot_img
spot_imgspot_img

ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಸೇರಲಿದ್ದಾರೆ ಈ ಶಾಸಕ..!?

- Advertisement -G L Acharya panikkar
- Advertisement -

ಗುವಾಹಟಿ: ಅಸ್ಸಾಂನ ಕಾಂಗ್ರೆಸ್ ಶಾಸಕ ರೂಪ್‌ಜ್ಯೋತಿ ಕುರ್ಮಿ ರಾಜೀನಾಮೆ ನೀಡಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.

ಚಹಾ ಬುಡಕಟ್ಟು ಸಮುದಾಯದ ಪ್ರಮುಖ ಸದಸ್ಯರಾದ ರೂಪ್‌ಜ್ಯೋತಿ ಕುರ್ಮಿ, ಕಾಂಗ್ರೆಸ್ ನ ಮಾಜಿ ಸಚಿವ ದಿ. ರೂಪಮ್ ಕುರ್ಮಿಯವರ ಪುತ್ರರಾಗಿದ್ದು, 2006 ರಿಂದ ಮರಿಯಾನಿ ಕ್ಷೇತ್ರದಿಂದ ಕಾಂಗ್ರೇಸ್ ಗೆ ಆಯ್ಕೆಯಾಗಿದ್ದಾರೆ. ಇದೀಗ “ತಮ್ಮ ರಾಜೀನಾಮೆ ಪತ್ರವನ್ನು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಸಹ ತಲುಪಿಸಿದ್ದೇನೆ” ಎಂದು ತಿಳಿಸಿದರು.

ರಾಜ್ಯದ ಚಹಾ ಬೆಳೆಗಾರರ ಸಮುದಾಯದ ನಾಯಕನಾಗಿರುವ ರೂಪ್‌ಜ್ಯೋತಿ ಕುರ್ಮಿ ತಮ್ಮ ರಾಜೀನಾಮೆ ಪತ್ರವನ್ನು ಸ್ಪೀಕರ್ ಬಿಸ್ವಜಿತ್ ಡೈಮರಿ ಅವರಿಗೆ ವಿಧಾನಸಭೆಯ ಕಚೇರಿಗೆ ತೆರಳಿ ಸಲ್ಲಿಸಿದ್ದು,ಇದೇ 21ರಂದು ಬಿಜೆಪಿಗೆ ಸೇರ್ಪಡೆಗೊಳ್ಳುತ್ತಿರುವುದಾಗಿ ಹೇಳಿದ್ದಾರೆ.

ನಾಲ್ಕು ಬಾರಿ ಕಾಂಗ್ರೆಸ್ ನಿಂದ ಶಾಸಕರಾಗಿ ಆಯ್ಕೆಯಾಗಿದ್ದ ರೂಪ್‌ಜ್ಯೋತಿ ಕುರ್ಮಿ ಅವರನ್ನು ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಉಚ್ಛಾಟಿಸಿತ್ತು. ಮಾಜಿ ಶಾಸಕ ರಾಣಾ ಗೋಸ್ವಾಮಿ ನೇತೃತ್ವದಲ್ಲಿ ಬೋರಾ ಅವರು ಮೂವರು ಸದಸ್ಯರ ತಂಡವನ್ನು ರಚಿಸಿ, ಮರಿಯಾನಿ ವಿಧಾನಸಭಾ ಕ್ಷೇತ್ರಕ್ಕೆ ಭೇಟಿ ನೀಡಲು ಮತ್ತು ಅಲ್ಲಿನ ರಾಜಕೀಯ ಪರಿಸ್ಥಿತಿಯನ್ನು ಸಂಗ್ರಹಿಸಲು ಸೂಚಿಸಿದ್ದು, ಥೌರಾ ಶಾಸಕ ಸುಶಾಂತ ಬೋರ್ಗೊಹೈನ್ ಮತ್ತು ಮನೋಜ್ ಧನೊವರ್ ತಂಡದ ಇತರ ಸದಸ್ಯರು ಅಸ್ಸಾಂ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ರಿಪುನ್ ಬೊರಾ ಹೇಳಿಕೆ ನೀಡಿದ್ದಾರೆ. ಅಖಿಲ ಭಾರತ ಕಾಂಗ್ರೆಸ್ ಸಮಿತಿ ನಿರ್ಧಾರವನ್ನು ಅನುಮೋದಿಸಿದೆ ಎಂದು ತಿಳಿಸಿದ್ದಾರೆ.

- Advertisement -

Related news

error: Content is protected !!