Sunday, May 19, 2024
spot_imgspot_img
spot_imgspot_img

ಭಜರಂಗದಳ ನಿಷೇಧ, ಮೀಸಲಾತಿ ಶೇ.75ರವರೆಗೆ ಹೆಚ್ಚಳ, NEP ರದ್ದು ; ಕೈ ಪಕ್ಷದ ಪ್ರಣಾಳಿಕೆ ರಿಲೀಸ್‌

- Advertisement -G L Acharya panikkar
- Advertisement -

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿಯಿದೆ.ಈ ಹಿನ್ನೆಲೆಯಲ್ಲಿ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಣಾಳಿಕೆ ಬಿಡುಗಡೆಗೊಳಿಸಿದರು. ಕಾಂಗ್ರೆಸ್​ ಈಗಾಗಲೇ ಆರು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿರುವ ಕಾಂಗ್ರೆಸ್‌, ಇನ್ನೂ ಹತ್ತು ಹಲವು ಭರವಸೆಗಳನ್ನು ಒಳಗೊಂಡ ‘ಸರ್ವ ಜನಾಂಗದ ಶಾಂತಿಯ ತೋಟ ಇದುವೆ ಕಾಂಗ್ರೆಸ್​ ಬದ್ಧತೆ’ ಎನ್ನುವ ಹೆಸರಿನಲ್ಲಿ ಚುನಾವಣಾ ಪ್ರಣಾಳಿಕೆಯನ್ನು ಇಂದು ಬಿಡುಗಡೆ ಮಾಡಿದೆ.

ಎಸ್‍ಸಿ ಸಮುದಾಯಕ್ಕೆ ಶೇ. 15 ರಿಂದ 17ಕ್ಕೆ, ಎಸ್‍ಟಿ ಸಮುದಾಯಕ್ಕೆ ಶೇ. 3 ರಿಂದ 7ಕ್ಕೆ, ಅಲ್ಪಸಂಖ್ಯಾತರಿಗೆ ಶೇ. 4ರ ಮರುಸ್ಥಾಪನೆ, ಲಿಂಗಾಯತ,ಒಕ್ಕಲಿಗ ಮತ್ತಿತರ ಸಮುದಾಯಗಳ ಆಶೋತ್ತರಗಳನ್ನು ಈಡೇರಿಸಲು ಮೀಸಲಾತಿಯನ್ನು ಶೇ. 50ರಿಂದ 75ರವರೆಗೆ ಹೆಚ್ಚಿಸಲು ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಇದರ ಜೊತೆಗೆ ಬಿಜೆಪಿ ಜಾರಿಗೆ ತಂದ ಎಲ್ಲಾ ಜನ ವಿರೋಧಿ ಕಾನೂನುಗಳು ಒಂದು ವರ್ಷದಲ್ಲಿ ರದ್ದುಗೊಳಿಸುವುದರ ಜೊತೆಗೆ ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಸಮಾಜದಲ್ಲಿ ದ್ವೇಷವನ್ನು ಬಿತ್ತಿ ವಿಭಜನೆಗೆ ಕಾರಣವಾಗುವ ಬಜರಂಗದಳವನ್ನು ನಿಷೇಧಿಸುತ್ತೇವೆ ಎಂದು ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದೆ.

ಪ್ರಣಾಳಿಕೆಯ ಮುಖ್ಯಾಂಶಗಳು:-

  • ಬಿಪಿಎಲ್‌ ಕುಟುಂಬಕ್ಕೆ ಪ್ರತಿ ತಿಂಗಳು 10 ಕೆ.ಜಿ ಅಕ್ಕಿ
  • ಗೃಹಲಕ್ಷ್ಮೀ ಯೋಜನೆಯಡಿಯಲ್ಲಿ ಮನೆಯ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರೂ.
  • ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರವವರನ್ನು ಖಾಯಂ ಕೆಲಸಗಾರರಾಗಿ ನೇಮಕ
  • ಆರೋಗ್ಯ & ಕುಟುಂಬ ಕಲ್ಯಾಣದಲ್ಲಿ ಕೆಲಸ ಮಾಡುವ ನೌಕರರ ಉದ್ಯೋಗ ಖಾಯಂ
  • ಗೃಹಜ್ಯೋತಿ ಯೋಜನೆಯಡಿಯಲ್ಲಿ 200 ಯೂನಿಟಿ ಉಚಿತ ವಿದ್ಯುತ್‌
  • ಮಹಿಳೆಯರಿಗೆ ಸರ್ಕಾರಿ ಬಸ್‌ ನಲ್ಲಿ ಉಚಿತಪ್ರಯಾಣ
  • ಆಶಾ ಕಾರ್ಯಕರ್ತೆಯರ ಗೌರವಧನ 8 ರೂ.ಗೆ ಹೆಚ್ಚಳ
  • ಯುವನಿಧಿ ಯೋಜನೆಯಡಿಯಲ್ಲಿ ನಿರುದ್ಯೋಗ ಯುವಕರಿಗೆ ನೆರವು ( 3 ಸಾವಿರ ರೂ ಸಹಾಯಧನ)
  • ಖಾಲಿ ಇರುವ ಎಲ್ಲಾ ಸರ್ಕಾರಿ ಹುದ್ದೆಗಳನ್ನು 1 ವರ್ಷದಲ್ಲಿ ಭರ್ತಿ ಮಾಡಲಾಗುತ್ತದೆ.
  • ಅಂಗನವಾಡಿ ಕಾರ್ಯಕರ್ತೆಯರ ವೇತನ 15 ರೂ.ಗೆ ಹೆಚ್ಚಳ.
  • ಕೋಮುಗಳ ನಡುವೆ ಯಾವುದೇ ಬಗೆಯ ದ್ವೇಷ ಬಿತ್ತುವ ಬಜರಂಗದಳ, ಪಿಎಫ್‌ ಐ ಸೇರಿದಂತೆ ಇತರ ಯಾವುದೇ ಸಂಘಟನೆಗಳಿದ್ದರೂ ಅದನ್ನು ಕಾನೂನು ಅನುಸಾರವಾಗಿ ನಿಷೇಧ.
  • ನೀರಾವರಿಗಾಗಿ 5 ವರ್ಷದಲ್ಲಿ 1.50 ಲಕ್ಷ ಕೋಟಿ ರೂ. ಮೀಸಲು
  • ಬಿಸಿಯೂಟ ನೌಕರರ ಗೌರವಧನ 6 ಸಾವಿರ ರೂ.ಗೆ ಹೆಚ್ಚಳ
  • ರಾತ್ರಿಪಾಳಿಯ ಪೊಲೀಸ್‌ ಸಿಬ್ಬಂದಿ 5000 ರೂ. ವಿಶೇಷ ಭತ್ಯೆ
  • ಪ್ರತಿ ಜಿಲ್ಲೆಯಲ್ಲಿ ಸೈಬರ್‌ ಠಾಣೆ ನಿರ್ಮಾಣದ ಗುರಿ
  • ಕನಕಪುರದಲ್ಲಿ ವಿಧಿವಿಜ್ಞಾನ ವಿಶ್ವವಿದ್ಯಾಲಯ ಸ್ಥಾಪನೆ
  • ಎನ್‌ ಇಪಿಯನ್ನು ರದ್ದು ಮಾಡಿ ಕರ್ನಾಟಕ ಶಿಕ್ಷಣ ನೀತಿಯನ್ನು ಅನುಷ್ಠಾನ ಮಾಡಲಾಗುವುದು.
  • 4 ವರ್ಷದಲ್ಲಿ ಎಲ್ಲಾ ಪೊಲೀಸ್‌ ಸಿಬ್ಬಂದಿಗೆ ವಸತಿ ಸೌಲಭ್ಯ
  • ಮುಸ್ಲಿಂಮರ ಶೇ.4 ರಷ್ಟು ಮೀಸಲಾತಿ ಮರುಸ್ಥಾಪನೆ
  • ಬೆಂಗಳೂರಿನಲ್ಲಿ ಮಧ್ಯರಾತ್ರಿ 1 ಗಂಟೆಯವರೆಗೆ ಬಸ್‌ ಸೌಲಭ್ಯ
  • ಎಲ್ಲಾ ಪೊಲೀಸರಿಗೆ ವರ್ಷಕ್ಕೆ 1 ತಿಂಗಳ ವೇತನ ಹೆಚ್ಚಳ
  • ಎಸ್‌ ಟಿ , ಎಸ್‌ ಸಿ ಮೀಸಲಾತಿ ಹೆಚ್ಚಳ ಮಾಡುವುದಾಗಿ ಭರವಸೆ
  • ನಾಡದೋಣಿ ಮೀನುಗಾರರಿಗೆ 10 ಸಾವಿರ ಹಣಕಾಸಿನ ನೆರವು
  • ಮೀನುಗಾರಿಕಾ ಕ್ಷೇತ್ರದಲ್ಲಿ 10 ಲಕ್ಷ ಉದ್ಯೋಗ ಸೃಷ್ಟಿ
  • ಮೀನುಗಾರಿಕಾ ಮಹಿಳೆಯರಿಗೆ 3 ಲಕ್ಷದವರೆಗೆ ಬಡ್ಡಿ ರಹಿತ ಸಾಲ
  • ಎಸ್‌ ಸಿ ಸಮುದಾಯ ಮೀಸಲಾತಿ ಶೇ 17 ಹೆಚ್ಚಿಸುವ ಭರವಸೆ,ಎಸ್‌ ಟಿ ಸಮುದಾಯ ಮೀಸಲಾತಿ ಶೇ. 7 ಹೆಚ್ಚಿಸುವ ಭರವಸೆ
  • ಆಟೋ, ಟ್ಯಾಕ್ಸಿ ಚಾಲಕರ ಮಂಡಳಿ ಸ್ಥಾಪಿಸುವ ಭರವಸೆ
  • ಕೋರ್ಟ್‌ ಗಳ ಆಧುನಿಕರಣದ ಭರವಸೆ
  • ಪತ್ರಕರ್ತರಿಗೆ ಸಾಮಾಜಿಕ ಭದ್ರತೆ ಕಲ್ಪಿಸುವ ಭರವಸೆ
  • ಮಂಗಳಮುಖಿ ಮಂಡಳಿ ಸ್ಥಾಪಿಸುವ ಭರವಸೆ
- Advertisement -

Related news

error: Content is protected !!