Wednesday, June 26, 2024
spot_imgspot_img
spot_imgspot_img

ನಾವೆಲ್ಲರೂ ಭಾರತೀಯರು, ಸಾಮರಸ್ಯ, ಸೌಹಾರ್ದತೆ, ಐಕ್ಯತೆ ಇರಬೇಕು : ಮೆಲ್ಕಾರ್ ಸಂವಿಧಾನ ಪೀಠಿಕೆ ಓದು ಕಾರ್ಯಕ್ರಮದಲ್ಲಿ ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ

- Advertisement -G L Acharya panikkar
- Advertisement -

ಬಂಟ್ವಾಳ ಜಮೀಯ್ಯತುಲ್ ಫಲಾಹ್ ವತಿಯಿಂದ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯು ಮೆಲ್ಕಾರ್ ಎಂ.ಎಚ್. ಕಂಪೌಂಡ್ ನಲ್ಲಿ 15.09.2023 ಶುಕ್ರವಾರ ನಡೆಯಿತು.

ಕಾರ್ಯಕ್ರಮದಲ್ಲಿ ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ ಮಾತನಾಡಿ ನಾವೆಲ್ಲರೂ ಭಾರತೀಯರು, ಸಾಮರಸ್ಯ, ಸೌಹಾರ್ದತೆ, ಐಕ್ಯತೆ ಇರಬೇಕು. ನಮಗೆ ಸಂವಿಧಾನ ಹಲವಾರು ಅವಕಾಶಗಳನ್ನು ನೀಡಿದೆ. ಬಡವ-ಶ್ರೀಮಂತರನ್ನು ಒಂದೇ ರೀತಿ ನೋಡಿದೆ ಎಂದು ಹೇಳಿದರು
ಸಮಾರಂಭದ ಅಧ್ಯಕ್ಷತೆಯನ್ನು ಜಮೀಯ್ಯತುಲ್ ಫಲಾಹ್ ಅಧ್ಯಕ್ಷ ರಶೀದ್ ವಿಟ್ಲ ವಹಿಸಿದರು. ಕಾರ್ಯದರ್ಶಿ ಕೆ.ಕೆ. ಶಾಹುಲ್ ಹಮೀದ್ ಸಂವಿಧಾನ ಪೀಠಿಕೆ ವಾಚಿಸಿದರು. ಸಭಿಕರು ವಾಚಿಸಿ ಪ್ರತಿಜ್ಞೆ ಕೈಗೊಂಡರು.

ಬಂಟ್ವಾಳ ಸ್ಪೀಚ್ ವೀವರ್ಸ್ ಕ್ಲಬ್ (ಟೋಸ್ಟ್ ಮಾಸ್ಟರ್ಸ್) ಅಧ್ಯಕ್ಷರಾದ ಅಹ್ಮದ್ ಮುಸ್ತಫಾ ಗೋಳ್ತಮಜಲು ಅವರನ್ನು ಅಭಿನಂದಿಸಲಾಯಿತು. ಕೋಶಾಧಿಕಾರಿ ಎಂ.ಎಚ್. ಇಕ್ಬಾಲ್, ಪೂರ್ವಾಧ್ಯಕ್ಷರಾದ ಮಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು, ಮಹಮ್ಮದ್ ಅಲಿ ಮಿತ್ತಬೈಲು, ಅಬೂಬಕರ್ ನೋಟರಿ, ಎಫ್.ಎಂ. ಬಶೀರ್, ಆಸಿಫ್ ಇಕ್ಬಾಲ್, ಉಸ್ಮಾನ್ ಕರೋಪಾಡಿ, ಸುಲೈಮಾನ್ ಸೂರಿಕುಮೇರು, ಪಿ. ಮಹಮ್ಮದ್ ಬ್ಯಾರಿ, ಉಪಾಧ್ಯಕ್ಷ ಲತೀಫ್ ನೇರಳಕಟ್ಟೆ, ಪದಾಧಿಕಾರಿಗಳಾದ ಅಬ್ಬಾಸ್ ಅಲಿ ಬೋಳಂತೂರು, ಹಕೀಂ ಕಲಾಯಿ ಉಪಸ್ಥಿತರಿದ್ದರು. ಉಪಾಧ್ಯಕ್ಷ ಶೇಖ್ ರಹ್ಮತುಲ್ಲಾ ವಂದಿಸಿದರು.

- Advertisement -

Related news

error: Content is protected !!