Tuesday, April 23, 2024
spot_imgspot_img
spot_imgspot_img

ಜಾಮಿಯಾ ಮಸೀದಿ ಈ ಹಿಂದೆ ಆಂಜನೇಯ ದೇವಸ್ಥಾನವಾಗಿತ್ತು “ಶ್ರೀರಂಗಪಟ್ಟಣ ಚಲೋ” ಗೆ ವಿ.ಹೆಚ್.ಪಿ.ಯಿಂದ ಕರೆ; ಖಾಕಿ ಹೈ ಅಲರ್ಟ್

- Advertisement -G L Acharya panikkar
- Advertisement -

ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ಹಿಂದೆ ದೇವಸ್ಥಾನ ಆಗಿತ್ತು ಎಂದು ವಾದಿಸುತ್ತಿರುವ ಹಿಂದೂ ಪರ ಸಂಘಟನೆಗಳು ಇಂದು (ಜೂನ್ 4 ರಂದು) ಶ್ರೀರಂಗಪಟ್ಟಣ ಚಲೋಗೆ ಕರೆ ನೀಡಿದೆ. ಜಾಮಿಯಾ ಮಸೀದಿ ಈ ಹಿಂದೆ ಮೂಡಲಬಾಗಿಲು ಆಂಜನೇಯಸ್ವಾಮಿ ದೇವಸ್ಥಾನವಾಗಿತ್ತು, ಟಿಪ್ಪು ಸುಲ್ತಾನ್ ದೇವಸ್ಥಾನದ ಮೇಲೆ ಈ ಜಾಮಿಯಾ ಮಸೀದಿಯನ್ನು ನಿರ್ಮಾಣ ಮಾಡಿದ್ದಾರೆ. ಹಾಗಾಗಿ, ಮಸೀದಿ ಒಳಗೆ ಪೂಜೆ ಸಲ್ಲಿಸಲು ನಮಗೆ ಅವಕಾಶ ನೀಡಬೇಕು ಎಂದು ಜಿಲ್ಲಾಧಿಕಾರಿಗೆ ವಿಶ್ವ ಹಿಂದೂ ಪರಿಷತ್ (ವಿಹೆಚ್‌ಪಿ) ಮನವಿ ಸಲ್ಲಿಸಿತ್ತು.

ಈ ಮನವಿಯನ್ನು ಜಿಲ್ಲಾಧಿಕಾರಿ ಗಂಭೀರವಾಗಿ ಪರಿಗಣಿಸಿದ ಕಾರಣ, ಇಂದು ಶ್ರೀರಂಗಪಟ್ಟಣ ಚಲೋಗೆ ಕರೆ ನೀಡಿದೆ. ಜಾಮಿಯಾ ಮಸೀದಿಗೆ ಪ್ರವೇಶಿಸಿ ಪೂಜೆ ಮಾಡುವುದಾಗಿ ಹೇಳಿದೆ. ಈ ಹಿನ್ನೆಲೆ ಮಸೀದಿ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಿರುವ ಜಿಲ್ಲಾಡಳಿತ ಹೈ ಅಲರ್ಟ್ ಘೋಷಿಸಿದೆ. ಅಲ್ಲದೆ, ಬಿಗಿ ಪೊಲೀಸ್ ಬಂದೋ ಬಸ್ತ್ ಏರ್ಪಡಿಸಿದೆ.

vtv vitla
- Advertisement -

Related news

error: Content is protected !!