Thursday, April 25, 2024
spot_imgspot_img
spot_imgspot_img

ಕೊರೊನಾ ಭೀತಿ ನಡುವೆ ಬಕ್ರೀದ್ ಹಬ್ಬ: ಸರ್ಕಾರದಿಂದ ಮಾರ್ಗಸೂಚಿ ಪ್ರಕಟ.

- Advertisement -G L Acharya panikkar
- Advertisement -

ವರದಿ: ನ್ಯೂಸ್ ಡೆಸ್ಕ್, ವಿ ಟಿವಿ

ಬೆಂಗಳೂರು: ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಆದರೆ ಈ ನಡುವೆ ಆಗಸ್ಟ್ 1ರಂದು ಬಕ್ರೀದ್ ಹಬ್ಬ ಆಚರಣೆ ಮಾಡುವುದಾಗಿ ಹಿಲಾಲ್ ಸಮಿತಿ ತಿಳಿಸಿದೆ. ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಗಳಲ್ಲಿ ಜುಲೈ 31ರಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಿನ್ನಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ರಾಜ್ಯ ಸರ್ಕಾರ ಕೆಲ ಮಾರ್ಗಸೂಚಿಗಳನ್ನು ಪ್ರಕಟ ಮಾಡಿದೆ.

ಗೈಡ್ ಲೈನ್ಸ್ ಹೊರಡಿಸಿದ ಸರ್ಕಾರ:

*ಪ್ರಾರ್ಥನ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ

*60 ವರ್ಷಕ್ಕಿಂತ ಮೇಲ್ಪವರು ಹಾಗೂ 10 ವರ್ಷಕ್ಕಿಂತ ಕೆಳಗಿನವರು ಮನೆಯಲ್ಲಿಯೇ ಪ್ರಾರ್ಥನೆ ಮಾಡಬೇಕು.

*ನಮಾಜ್ ಮಾಡುವಾಗ ಸಾಮಾಜಿಕ ಅಂತರ ಕಡ್ಡಾಯ.

*ಮಸೀದಿ ಪ್ರವೇಶಿಸುವ ಮುನ್ನ ದೇಹದ ತಾಪಾಮಾನ ತಪಾಸಣೆ ಮಾಡಬೇಕು.

*ಕೈಗಳನ್ನು ಸೋಪು ಅಥವಾ ಸ್ಯಾನಿಟೈಸರ್ ನಿಂದ ಸ್ವಚ್ಛ ಮಾಡಿಕೊಳ್ಳಬೇಕು.

*ಮಸೀದಿಗಳಲ್ಲಿ ಧಾರ್ಮಿಕ ಗ್ರಂಥಗಳನ್ನು ಮುಟ್ಟುವಂತಿಲ್ಲ.

*ತಮ್ಮ ಮನೆಗಳಿಂದ ಮುಸಲ್ಲಾವನ್ನು ತರುವುದು ಕಡ್ಡಾಯ.

*ಹಸ್ತಲಾಘನ, ಆಲಿಂಗನ ಮಾಡುವಂತಿಲ್ಲ.

*ಅಪರಿಚಿತರು ಪ್ರಾರ್ಥನೆ ಮಾಡಲು ಬಂದರೆ ಅವರ ಮೇಲೆ ವಿಶೇಷ ಗಮನವಿರಲಿ.

*ಈದ್ಗಾಹ್ ಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಿಷೇಧ.

*ಪ್ರಾರ್ಥನೆ ವೇಳೆ ಮಸೀದಿಗಳಲ್ಲಿ ಗರಿಷ್ಠ 50 ಜನ ಮೀರಬಾರದು.

*5 ಹೊತ್ತಿನ ನಮಾಜ್ ನಿರ್ಬಂಧ.

*ಸಭಾಂಗಣ, ಸಮುದಾಯ ಭವನ, ಶಾದಿ ಮಹಲ್ ನಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ವಿಲ್ಲ.

- Advertisement -

Related news

error: Content is protected !!