Friday, April 19, 2024
spot_imgspot_img
spot_imgspot_img

ಕೊರೊನಾ ನಿರ್ವಹಣೆಯಲ್ಲಿ ನಮ್ಮ ಜವಾಬ್ದಾರಿ ಮರೆಯಬಾರದು – ಪ್ರಧಾನಿ ಮೋದಿ

- Advertisement -G L Acharya panikkar
- Advertisement -

ನವದೆಹಲಿ: ಕೊರೊನಾ ವ್ಯಾಕ್ಸಿನ್​​​​ ತಯಾರಿಕೆ ಬಗ್ಗೆ ವಿಜ್ಞಾನಿಗಳು ಗಮನ ಹರಿಸಿದ್ದಾರೆ.. ನಾವು ಕೊರೊನಾ ನಿಯಂತ್ರಣಕ್ಕಾಗಿ ಮೈ ಮರೆಯದೇ ನಮ್ಮ ಜವಾಬ್ದಾರಿ ಬಿರ್ವಹಿಸ ಬೇಕಿದೆ ಅಂತಾ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಎಚ್ಚರ ಪೂರ್ವಕವಾದ ಮಾತುಗಳನ್ನು ಆಡಿದ್ದಾರೆ.ಕೊರೊನಾ ಲಸಿಕೆ ಸಂಬಂಧ ಪ್ರಧಾನಿ ಮೋದಿ ಅವರು 8 ರಾಜ್ಯಗಳ ಜೊತೆ ಮಹತ್ವದ ಸಭೆ ನಡೆಸಿದರು.

ಸಭೆ ಬಳಿಕ ಮಾತನಾಡಿದ ಮೋದಿ.. ನಿಮ್ಮೆಲ್ಲರ ಜಂಟಿ ಪ್ರಯತ್ನಗಳ ಫಲವಾಗಿ ಇಂದು ಭಾರತವು ಚೇತರಿಕೆ ಪ್ರಮಾಣ ಹೆಚ್ಚಾಗಿದೆ ಅಂತಾ ಹೇಳಿದರು. ದೇಶದಲ್ಲಿ ಸಾವಿನ ಪ್ರಮಾಣ ಕಮ್ಮಿಯಾಗಿದೆ. ಇತರೆ ದೇಶಗಳಿಗೆ ನಾವು ಹೋಲಿಸಿದರೆ ಕೊರೊನಾ ವಿಚಾರದಲ್ಲಿ ಭಾರತದ ಪರಿಸ್ಥಿತಿ ಉತ್ತಮವಾಗಿದೆ ಅಂತಾ ಹೇಳಿದರು.

ಹಲವು ರಾಷ್ಟ್ರಗಳಲ್ಲಿ ಎರಡನೇ ಮತ್ತು ಮೂರನೇ ಅಲೆಗಳು ದೊಡ್ಡ ಪ್ರಮಾಣದಲ್ಲಿ ಬಂದಿರೋದನ್ನು ನಾವು ಗಮನಿಸಿದ್ದೇವೆ. ಹೀಗಾಗಿ, ನಾವು ಸದ್ಯ ಮತ್ತಷ್ಟು ಎಚ್ಚರ ವಹಿಸಬೇಕಿದೆ ಅಂತ ಅವರು ಹೇಳಿದ್ದಾರೆ. ಅಲ್ಲದೇ, ನಾವು ಆಳ ನೀರನ್ನು ದಾಟಿ ದಡದತ್ತ ಬರುತ್ತಿದ್ದೇವೆ. ಹೀಗಾಗಿ ಈಗ ಮೈ ಮರೆತು ಕಡಿಮೆ ಆಳದ ನೀರಿನಲ್ಲಿ ಮುಳುಗಬಾರದು ಅಂತಾ ಅವರು ಮಾರ್ಮಿಕವಾಗಿ ಹೇಳಿದ್ದಾರೆ.

ದೇಶದಲ್ಲಿ ಚೇತರಿಕೆಯ ಪ್ರಮಾಣ ಹೆಚ್ಚಾಗಿದೆ. ವೈರಸ್​ ದುರ್ಬಲವಾಗಿದೆ, ಹೀಗಾಗಿ ಕೊರೊನಾ ಸೋಂಕಿತರು ಬೇಗ ಗುಣಮುಖರಾಗುತ್ತಿದ್ದಾರೆ ಎಂದು ಹಲವು ಭಾವಿಸಿದ್ದಾರೆ. ಲಸಿಕೆ ತಯಾರಿಸುವ ಕಾರ್ಯ ಮುಂದುವರಿದಿದೆ. ಆದರೆ ಜನರು ಸದಾ ಜಾಗೃತರಾಗಿರಬೇಕು. ಕೊರೊನಾ ಹರಡುವುದನ್ನ ತಡೆಯಬೇಕು. ನಾವು ಇಂದು ಪಾಸಿಟವ್ ಪ್ರಕರಣವನ್ನ ಶೇಕಡಾ 5 ಕ್ಕಿಂತ ಕಡಿಮೆ ದರಕ್ಕೆ ತರಬೇಕು, ಅಲ್ಲದೇ ಸಾವಿನ ಪ್ರಮಾಣವನ್ನು ಶೇ.1 ಕ್ಕಿಂತ ಕೆಳಕ್ಕೆ ತರಬೇಕು ಅಂತಾ ಅವರು ಹೇಳಿದ್ದಾರೆ.

ಜನರ ಸೇಫ್ಟಿ ನಮಗೆ ಕೊರೊನಾ ಲಸಿಕತೆಯ ಲಭ್ಯತೆಯ ವೇಗದಷ್ಟೇ ಮುಖ್ಯವಾಗಿದೆ. ಭಾರತವು ತನ್ನ ನಾಗರೀಕರಿಗೆ ನೀಡುವ ಲಸಿಕೆ ವೈಜ್ಞಾನಿಕ ಮಾನದಂಡಗಳನ್ನ ಅನುಸರಿಸಿರುತ್ತದೆ. ಜೊತೆಗೆ ಸುರಕ್ಷಿತವಾಗಿರುತ್ತದೆ. ಕೊರೊನಾ ಲಸಿಕೆ ಹಂಚಿಕೆ ವಿಚಾರದಲ್ಲಿ ಎಲ್ಲಾ ರಾಜ್ಯಗಳ ಅಭಿಪ್ರಾಯವನ್ನ ಸಂಗ್ರಹಿಸಿ ಒಂದು ನಿರ್ಧಾರಕ್ಕೆ ಬರುತ್ತೇವೆ. ಕೊರೊನಾ ಸೋಂಕಿತರನ್ನ ಪತ್ತೆಹಚ್ಚುವ ಕಾರ್ಯ ಮತ್ತಷ್ಟು ಹೆಚ್ಚಿಸಬೇಕಾಗಿದೆ. ಪ್ರತೀ ರಾಜ್ಯಗಳಲ್ಲೂ ಕೊರೊನಾ ಟೆಸ್ಟಿಂಗ್ ಹಾಗೂ ಟ್ರೇಸಿಂಗ್ ಕೆಲಸ ದ್ವಿಗುಣಗೊಳ್ಳಬೇಕಿದೆ. ಹೀಗಾದರೆ ಇನ್ಮುಂದೆ ಕೊವಿಡ್​ಗೆ ಸಂಬಂಧಿಸಿದ ಕಳಂಕ ಹೆಚ್ಚು ದಿನ ಇರಲ್ಲ ಅಂತಾ ವಿಶ್ವಾಸ ವ್ಯಕ್ತಪಡಿಸಿದರು.

- Advertisement -

Related news

error: Content is protected !!