- Advertisement -
- Advertisement -
ಸುಳ್ಯ: ಜು.14ರಂದು ಸುಳ್ಯದಲ್ಲಿ ಅಕ್ರಮ ದನ ಸಾಗಾಟ ಪ್ರಕರಣದಲ್ಲಿ ಬಂಧಿತನಾದ ಕರಿಕೆಯ ಅಬ್ದುಲ್ ಫಾರೂಕ್ ಗೆ ಕೊರೊನಾ ಪಾಸಿಟಿವ್ ಬಂದಿರುವುದಾಗಿ ತಿಳಿದು ಬಂದಿದೆ.
ಈ ಹಿನ್ನಲೆಯಲ್ಲಿ ಸುಳ್ಯ ಪೋಲೀಸ್ ಠಾಣೆ ಸೀಲ್ ಡೌನ್ ಆಗಲಿದೆ. ಅಲ್ಲದೆ ಎಸ್.ಐ. ಹರೀಶ್ ಸೇರಿದಂತೆ ಆರೋಪಿಯ ಬಂಧನದಲ್ಲಿ ತೊಡಗಿಸಿಕೊಂಡ ಪೋಲೀಸರು ಕ್ವಾರೆಂಟೇನ್ ಗೆ ತೆರಳಲಿದ್ದಾರೆ.
ಆರೋಪಿ ಅಬ್ದುಲ್ ಫಾರುಕ್ ನನ್ನು ನ್ಯಾಯಾಲಯ ಕ್ಕೆ ಹಾಜರು ಪಡಿಸಿದಾಗ ಕೊರೊನಾ ಟೆಸ್ಟ್ ಗೆ ಸೂಚಿಸಲಾಗಿತ್ತು. ಅದರ ವರದಿ ಇಂದು ಬಂದಿದ್ದು ಅದು ಪಾಸಿಟಿವ್ ಆಗಿದೆ.
ಈ ಆರೋಪಿಗೆ ಇದೀಗ ಸುಳ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
- Advertisement -