Saturday, April 20, 2024
spot_imgspot_img
spot_imgspot_img

ಕೋವಿಡ್ ಸಂಕಷ್ಟದ ನಡುವೆಯು ಮೌಂಟ್ ಎವರೆಸ್ಟ್ ಚಾರಣಕ್ಕೆ ಗ್ರೀನ್ ಸಿಗ್ನಲ್!

- Advertisement -G L Acharya panikkar
- Advertisement -

ಕಠ್ಮಂಡು: ನೇಪಾಳವು ಕೊರೊನಾ ಸಾಂಕ್ರಾಮಿಕದ ನಡುವೆ ಈ ವರ್ಷ ವಿಶ್ವದ ಅತ್ಯುನ್ನತ ಶಿಖರ ಮೌಂಟ್ ಎವರೆಸ್ಟ್ ಚಾರಣಕ್ಕಾಗಿ ದಾಖಲೆ ಪ್ರಮಾಣದಷ್ಟು ಪರವಾನಗಿಯನ್ನು ನೀಡಿದೆ.

ಈ ವರ್ಷ, ಶುಕ್ರವಾರದ ತನಕ ಮೌಂಟ್ ಎವರೆಸ್ಟ್ ಚಾರಣಕ್ಕಾಗಿ ೩೯೪ ಪರವಾನಗಿಗಳನ್ನು ನೀಡಲಾಗಿದೆ. ೨೦೧೯ರಲ್ಲಿ ೩೮೧ ಪರವಾನಗಿಗಳನ್ನು ನೀಡಲಾಗಿತ್ತು’ ಎಂದು ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕಿ ಮೀರಾ ಆಚಾರ್ಯ ಅವರು ತಿಳಿಸಿದರು.

ನೇಪಾಳವು ಮೌಂಟ್ ಎವರೆಸ್ಟ್ ಚಾರಣದಿಂದ ಬರುವ ಆದಾಯ ಮೇಲೆ ಹೆಚ್ಚು ಅವಲಂಬಿತವಾಗಿದೆ. ಈ ವಾರ ಎವರೆಸ್ಟ್ ಬೇಸ್ ಕ್ಯಾಂಪ್‌ನಲ್ಲಿ ಮೊದಲ ಕೋವಿಡ್ ಪ್ರಕರಣ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಎವರೆಸ್ಟ್ ಬೇಸ್ ಕ್ಯಾಂಪ್‌ಗೆ ಆಗಮಿಸುವ ಮುನ್ನ ಪರ್ವತಾರೋಹಿಗಳು ಕ್ವಾರಂಟೈನ್‌ಗೆ ಒಳಗಾಗುವಂತೆ ನೇಪಾಳ ಸರ್ಕಾರ ಸೂಚಿಸಿದೆ.

ಈವರೆಗೆ ನೇಪಾಳದಲ್ಲಿ ೨,೯೭,೦೮೭ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ೩,೧೩೬ ಮಂದಿ ಸೋಂಕಿನಿAದ ಮೃತಪಟ್ಟಿದ್ದಾರೆ.

- Advertisement -

Related news

error: Content is protected !!