- Advertisement -
- Advertisement -
ಸುಳ್ಯ: ಅನಾರೋಗ್ಯದಿಂದ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿ, ಹೃದಯಾಘಾತದಿಂದ ಮೃತಪಟ್ಟ ಸುಳ್ಯದ ಕೆರೆಮೂಲೆ ನಿವಾಸಿಯಾಗಿದ್ದ ವೃದ್ಧೆಯ ಪರೀಕ್ಷೆಯ ವರದಿಯಲ್ಲಿ ಕೊವೀಡ್ -19 ಪಾಸಿಟಿವ್ ಬಂದಿದ್ದು ಈ ಮೂಲಕ ದಕ್ಷಿಣ ಕನ್ನಡ ಜಿಲೆಯಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ 20ಕ್ಕೇರಿದೆ.
ಮೃತಪಟ್ಟ ವೃದ್ಧೆ ವಾರದ ಹಿಂದೆಯಷ್ಟೇ ಅನಾರೋಗ್ಯಕ್ಕೆ ಒಳಗಾಗಿ ಸುಳ್ಯದ ಸರಕಾರಿ ಆಸ್ಪತ್ರೆಯ ಐಸಿಯು ಘಟಕದಲ್ಲಿ ದಾಖಲಾಗಿದ್ದರು. ಇದೇ ಸಮಯದಲ್ಲಿ ಮಂಗಳೂರಿನಲ್ಲಿ ಚಿಕಿತ್ಸೆ ಪಡೆದಿದ್ದ ವೃದ್ದರೊಬ್ಬರು ಅದೇ ವಾರ್ಡಿಗೆ ದಾಖಲಾಗಿದ್ದು, ಇವರಿಗೆ ಕೊರೊನಾ ದೃಢಪಟ್ಟಿತ್ತು. ಬಳಿಕ ಆಸ್ಪತ್ರೆಯ ಸಿಬ್ಬಂದಿಗಳಿಗೆ ಕೊರೊನಾ ಪರೀಕ್ಷೆ ನಡೆಸಿದಾಗ ಒಬ್ಬ ನರ್ಸ್ ಗೆ ಸೋಂಕು ದೃಢಪಟ್ಟಿತ್ತು. ಅದೇ ನರ್ಸ್ ಐಸಿಯುನಲ್ಲಿ ದಾಖಲಾಗಿದ್ದ ವೃದ್ಧೆಗೂ ಚಿಕಿತ್ಸೆ ನೀಡುತ್ತಿದ್ದರೆನ್ನಲಾಗಿದೆ.
ಕೊರೊನ ಪರೀಕ್ಷೆ ವರದಿ ಬರುವ ಮೊದಲೇ ವೃದ್ಧೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇವರ ಅಂತ್ಯಕ್ರಿಯೆ ಮಂಗಳೂರಿನಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ.
- Advertisement -