- Advertisement -
- Advertisement -
ಕುಂದಾಪುರ: ಕೆಎಸ್‌ಆರ್‌ಟಿಸಿ ಬಸ್ ಮೂವರು ಚಾಲಕರಿಗೆ ಪಾಸಿಟಿವ್ ಪತ್ತೆಯಾಗಿದೆ.ಗಂಟಲ ದ್ರವದ ಪರೀಕ್ಷೆಗಳನ್ನು ಮಾಡಲಾಗಿದ್ದು, ಸೋಮವಾರ ಮೂವರು ಚಾಲಕರಿಗೆ ಕೋವಿಡ್ ಸೋಂಕು ಇರುವುದು ದೃಢವಾಗಿದೆ.
ಬಸ್ರೂರಿನ 58 ವರ್ಷದ, ಬಾಗಲಕೋಟೆ ಮೂಲದ 36 ವರ್ಷದ ಹಾಗೂ 44 ವರ್ಷದ ಮೂವರು ಬಸ್ ಚಾಲಕರಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಮೂವರು ಕೂಡ ಕುಂದಾಪುರದಿಂದ ಹೊರ ಜಿಲ್ಲೆಗಳಿಗೆ ಸಂಚರಿಸುವ ಬಸ್‌ಗಳ ಚಾಲಕರಾಗಿದ್ದರು.
ಗುರುವಾರ ಕುಂದಾಪುರದಲ್ಲಿರುವ ಕೆಎಸ್‌ಆರ್‌ಟಿಸಿ ಡಿಪೋದ ಸಿಬಂದಿ, ಬಸ್ ಚಾಲಕರು, ನಿರ್ವಾಹಕರ ಗಂಟಲ ದ್ರವದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಅದರ ವರದಿ ಬಂದಿದ್ದು, ಅದರಲ್ಲಿ ಮೂವರಿಗೆ ಪಾಸಿಟಿವ್ ಬಂದಿದೆ.
- Advertisement -