- Advertisement -
- Advertisement -
ನವದೆಹಲಿ: ದೇಶದಲ್ಲಿ ಕೊರೊನಾ ವೈರಸ್ ಹಾವಳಿ ಮಿತಿಮೀರಿದೆ. ಬುಧವಾರ ಒಂದೇ ದಿನ 24,879 ಮಂದಿಗೆ ಕೊರೊನಾ ತಗುಲಿದೆ. ಹೀಗಾಗಿ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 7,67,296 ಆಗಿದೆ. ಶರವೇಗದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವುದರಿಂದ ಜನರು ಆತಂಕದಲ್ಲೇ ಕಾಲ ಕಳೆಯುವಂತಾಗಿದೆ.
487 ಮಂದಿಯನ್ನು ಬಲಿಪಡೆದುಕೊಂಡ ಕೊರೊನಾ.

ಬುಧವಾರ 487 ಮಂದಿ ಕೊರೊನಾ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. ಹೀಗಾಗಿ ದೇಶದಲ್ಲಿ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 21,129ಕ್ಕೆ ಏರಿಕೆಯಾಗಿದೆ. ಮತ್ತೊಂದುಕಡೆ ಕೊರೊನಾದಿಂದ ಗುಣಮುಖರಾಗುತ್ತಿರುವವ ಸಂಖ್ಯೆ ಕೂಡ ಶೇ.62 ಆಗಿದೆ. ಈವರೆಗೆ 4,76,378 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಆದರೆ ಇನ್ನೂ 2,69,789 ಪ್ರಕರಣಗಳು ಸಕ್ರೀಯವಾಗಿದೆ ಎಂದು ಆರೋಗ್ಯಯ ಸಚಿವಾಲಯ ಮಾಹಿತಿ ನೀಡಿದೆ.

- Advertisement -