ಬೆಂಗಳೂರು: ಕೊರೊನಾ ಸೋಂಕಿತ ಚೇತರಿಸಿಕೊಂಡಿದ್ದಾನೆ ಎಂದು ಡಿಸ್ಚಾರ್ಜ್ ವೇಳೆ ಕೋವಿಡ್ ಟೆಸ್ಟ್ ಮಾಡದೇ ವಿಕ್ಟೋರಿಯಾ ಆಸ್ಪತ್ರೆ ಯಡವಟ್ಟು ಮಾಡಿಕೊಂಡಿದೆ. ಡಿಸ್ಚಾರ್ಜ್ ಬಳಿಕ ಆತನ ಕೊರೊನಾ ಟೆಸ್ಟ್ ಪಾಸಿಟಿವ್ ಬಂದಿದೆ.

ತಾಜ್ ವೆಸ್ಟ್ ಎಂಡ್ ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೋರ್ವರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಹೀಗಾಗಿ ಅವರು ನಗರದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಅವರಿಗೆ ಜ್ವರ ಕಡಿಮೆಯಾಗಿ ಸಹಜ ಸ್ಥಿತಿಗೆ ಬಂದಿದ್ದರು. ಹೀಗಾಗಿ 10 ದಿನಗಳ ಬಳಿಕ ಅವರನ್ನು ಡಿಸ್ಚಾರ್ಜ್ ಮಾಡಲಾಗಿತ್ತು. ಆದರೆ ಡಿಸ್ಚಾರ್ಜ್ ವೇಳೆ ಅವರಿಗೆ ಕೊರೊನಾ ಟೆಸ್ಟ್ ಮಾಡಿಲ್ಲ.

ಇನ್ನು ಡಿಸ್ಚಾರ್ಜ್ ಬಳಿಕ ವ್ಯಕ್ತಿ ಹೊಟೇಲ್ ಅವರಿಗೆ ಕರೆ ಮಾಡಿ ತಿಳಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಅವರು, ಕೊರೊನಾ ಟೆಸ್ಟ್ ಮಾಡಿ ರಿಪೋರ್ಟ್ ತೆಗೆದುಕೊಂಡು ಬರುವಂತೆ ತಿಳಿಸಿದ್ದರು. ಈ ವೇಳೆ ಮಲ್ಲಿಗೆ ಆಸ್ಪತ್ರೆಗೆ ಹೋಗಿ ಟೆಸ್ಟ್ ಮಾಡಿದಾಗ ವರದಿ ಪಾಸಿಟಿವ್ ಬಂದಿದೆ. ಹೀಗಾಗಿ ಆಸ್ಪತ್ರೆ ಯಡವಟ್ಟಿನಿಂದ ಇಂತಹ ಎಷ್ಟು ಸೋಂಕಿತರಿಗೆ ಅಪಾಯ ಆಗಿದೆಯೋ ಎಂಬ ಆತಂಕ ಮನೆಮಾಡಿದೆ.