ಮಂಗಳೂರು: ಕೊರೊನಾ ಪಾಸಿಟಿವ್ ಪ್ರಕರಣ ರಾಜ್ಯದಲ್ಲಿ ಇಂದು ಕೂಡ ಸಾವಿರದ ಗಡಿ ದಾಟಿದೆ.
ರಾಜ್ಯದಲ್ಲಿ ಇಂದು 1925 ಪಾಸಿಟಿವ್ ಪತ್ತೆಯಾಗಿದೆ.
ಬೆಂಗಳೂರಿನಲ್ಲಿ 1235 ಪಾಸಿಟಿವ್ ಪತ್ತೆಯಾದರೆ, ದ.ಕ ಜಿಲ್ಲೆ 147 ಪಾಸಿಟಿವ್ ಪತ್ತೆಯಾಗಿದೆ. ಉಡುಪಿಯಲ್ಲಿ 38 ಪತ್ತೆಯಾಗಿದೆ.
ರಾಜ್ಯದಲ್ಲಿ ಇಂದು 38 ಮಂದಿ ಸಾವನ್ನಪ್ಪಿದ್ದಾರೆ.
ದ.ಕ ಜಿಲ್ಲೆಯಲ್ಲಿ 38 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
38 ಮಂದಿ ಪ್ರಾಥಮಿಕ ಸಂಪರ್ಕದಿಂದ, 40 ILI, 2 SARI, 8 ವಿದೇಶ, 7 ಹೊರರಾಜ್ಯ, 48 ರ‌್ಯಾಂಡಮ್ ಟೆಸ್ಟ್ ಸೇರಿ 147 ಮಂದಿ ಸೋಂಕಿತರ ಪತ್ತೆಯಾಗಿದೆ.
ಉಡುಪಿ ಜಿಲ್ಲೆಯಲ್ಲಿ ಮತ್ತೆ 45 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ನಡುವೆ 22 ಮಂದಿ ಇಂದು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಆ ಮೂಲಕ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 1322ಕ್ಕೆ ಏರಿಕೆಯಾಗಿದೆ. ಇನ್ನು ಜಿಲ್ಲೆಯಲ್ಲಿ ಇಲ್ಲಿಯ ತನಕ ಒಟ್ಟು 1136 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಜಿಲ್ಲೆಯಲ್ಲಿ ಸದ್ಯ 183 ಸಕ್ರಿಯ ಪ್ರಕರಣಗಳಿವೆ. ರವಿವಾರದಂದು ಜಿಲ್ಲೆಯಲ್ಲಿ 518 ಮಂದಿಯ ವರದಿ ನೆಗೆಟಿವ್ ಬಂದಿದೆ.
ಕಾಸರಗೋಡು: ಇಲ್ಲಿ 128 ಮಂದಿಗೆ ಕೊರೊನಾ ದೃಢವಾಗಿದೆ 120 ಸಕ್ರಿಯ ಪ್ರಕರಣಗಳಿವೆ