Thursday, April 25, 2024
spot_imgspot_img
spot_imgspot_img

ಕುಕ್ಕೆ ಸುಬ್ರಹ್ಮಣ್ಯ: ಲಾಕ್‌ಡೌನ್ ಹಿನ್ನಲೆ ಎಷ್ಟು ಕೋಟಿ ರೂ. ಆದಾಯ ಕಡಿಮೆ ಗೊತ್ತಾ..?

- Advertisement -G L Acharya panikkar
- Advertisement -

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಾಲಯವು 2020 ಎಪ್ರಿಲ್‌ನಿಂದ 2021 ಮಾರ್ಚ್ 31ರ ತನಕದ ಆರ್ಥಿಕ ವರ್ಷದಲ್ಲಿ 68,94,88,039.17 ರೂ. ಆದಾಯ ಗಳಿಸಿದೆ. ಕಳೆದ ವರ್ಷ ಮಾ. 17ರಿಂದ ಸೆ. 8ರ ತನಕ ದೇವಸ್ಥಾನವು ಲಾಕ್ ಡೌನ್ ಹಿನ್ನೆಲೆಯಲ್ಲಿ ಸಂಪೂರ್ಣ ಬಂದ್ ಆಗಿತ್ತು. ಈ 6 ತಿಂಗಳ ಅವಧಿಯಲ್ಲಿ ಶ್ರೀ ದೇವಳಕ್ಕೆ ಯಾವುದೇ ಆದಾಯ ಇರಲಿಲ್ಲ. ಬಳಿಕ ಸೆ. 15ರಿಂದ ಮಾ. 31ರ ತನಕ ಶ್ರೀ ದೇವಳಕ್ಕೆ ಬಂದ ಆದಾಯ ಇದಾಗಿದೆ ಎಂದು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ ತಿಳಿಸಿದ್ದಾರೆ.

2019-20ನೇ ಆರ್ಥಿಕ ವರ್ಷದಲ್ಲಿ 98,92,24,193.34 ರೂ. ಆದಾಯ ಗಳಿಸಿತ್ತು. ಕೊರೊನಾ ಕಾರಣ ಕಳೆದ ವರ್ಷಕ್ಕಿಂತ ಈ ಬಾರಿ 29,97,36,154.17 ರೂ. ಕಡಿಮೆ ಆದಾಯ ಬಂದಿದೆ ಎಂದರು.

ಆದಾಯದ ಮೂಲ ಹೇಗೆ.?
ದೇವಸ್ಥಾನಕ್ಕೆ ಮುಖ್ಯವಾಗಿ ಹರಕೆ ಸೇವೆ, ಕಾಣಿಕೆ ಡಬ್ಬಿ, ಬಡ್ಡಿ, ಛತ್ರಗಳ ಬಾಡಿಗೆ, ಕಟ್ಟಡಗಳ ಬಾಡಿಗೆ ಮತ್ತು ಕೃಷಿ ತೋಟದಿಂದ ಆದಾಯವು ಬರುತ್ತದೆ. ಗುತ್ತಿಗೆಗಳಿಂದ 72,35,331 ರೂ., ತೋಟದ ಉತ್ಪನ್ನದಿಂದ 15,64,681 ರೂ., ಕಟ್ಟಡ ಬಾಡಿಗೆಯಿಂದ 37,11,409ರೂ, ಕಾಣಿಕೆಯಿಂದ 3,34,69,717 ರೂ., ಕಾಣಿಕೆ ಹುಂಡಿಯಿAದ 12,75,11,301 ರೂ., ಹರಕೆ ಸೇವೆಗಳಿಂದ 24,10,63,401 ರೂ. ಆದಾಯ ದೇವಸ್ಥಾನಕ್ಕೆ ಬಂದಿದೆ.

ಅನುದಾನದಿಂದ 80,196 ರೂ., ಹೂಡಿಕೆಯಿಂದ ಬಂದ ಬಡ್ಡಿ 20,49,00,424 ರೂ., ಉಳಿತಾಯ ಖಾತೆ ಮತ್ತು ಇತರ ಖಾತೆಗಳಿಂದ ಬಂದ ಬಡ್ಡಿ 36,72,645 ರೂ., ಸಂಕೀರ್ಣ ಜಮೆಗಳಿಂದ 2,63,07,139 ರೂ., ಅನ್ನಸಂತರ್ಪಣೆ ನಿಧಿಯಿಂದ 3,54,61,982 ರೂ., ಅಭಿವೃದ್ಧಿ ನಿಧಿ 9,20,908 ರೂ., ಶಾಶ್ವತ ಸೇವಾ ಮೂಲಧನ 35,88,900 ರೂ. ಹೀಗೆ ಒಟ್ಟು 68 ಕೋಟಿ 94 ಲಕ್ಷದ 88 ಸಾವಿರದ 039.17 ರೂ. ಆದಾಯ ದೇವಸ್ಥಾನಕ್ಕೆ ಬಂದಿದೆ.

- Advertisement -

Related news

error: Content is protected !!